ಅಖಿಲ ಕರ್ನಾಟಕ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾಗಿ ಡಾ.ಬಸವರಾಜ ಶೆಟ್ಟಿಗಾರ್ ಕೋಟೇಶ್ವರ ಪುನರಾಯ್ಕೆ

Views: 103
ಕುಂದಾಪುರ: ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘ (ರಿ.) ಇದರ ಕರ್ನಾಟಕ ರಾಜ್ಯ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಾಜ್ಯಾಧ್ಯಕ್ಷರಾಗಿ ಪ್ರಸಂಗಕರ್ತ, ವಾಸ್ತು ತಜ್ಞ, ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಅವರನ್ನು 3 ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಬ್ರಹ್ಮಶ್ರೀ ಬೋಜ್ಜನ್ನ ಪಂತಲು ಅವರು ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆಡೆಪು ಹರೀಶ್, ಬ್ರಹ್ಮಶ್ರೀ ಪುಂಡಲೀಕಾನಂದ ತಾಟಿ ಪಾಮುಲು ಪಂತಲು, ಕರ್ನಾಟಕ ದತ್ತಾತ್ರೇಯ ಮಠದ ಆಸ್ಥಾನ ವಿದ್ವಾಂಸರಾದ ಕೇಶವಮೂರ್ತಿ ಭಾರ್ಗವಾಚಾರ್ಯ, ಕೋಶಾಧಿಕಾರಿ ಹೈದರಾಬಾದ್ ತೆಲಂಗಾಣದ ರಮೇಶ ಋಷಿ ಉಪಸ್ಥಿತರಿದ್ದರು.
ವಾಸ್ತುತಜ್ಞ ಕೋಟೇಶ್ವರ ಬಸವರಾಜ್ ಶೆಟ್ಟಿಗಾರ್ ಅವರು ಕೇರಳದ ಪಯ್ಯನೂರು ಎಂಬಲ್ಲಿ ಆಧುನಿಕ ಜ್ಯೋತಿಷ್ಯ ವಾಸ್ತುಶಾಸ್ತ್ರವನ್ನು ಅಧ್ಯಯನ ಮಾಡಿದ್ದು, ಮದುವೆ, ಗ್ರಹ ಪ್ರವೇಶ, ಗಣಪತಿ ಹೋಮ ಇತರ ಪೂಜೆ ಪುನಸ್ಕಾರ ಹೋಮ ಹವನಾದಿಗಳನ್ನು ಮಾಡುವುದರೊಂದಿಗೆ ತಾಂಬೂಲ ಪ್ರಶ್ನೆ, ಆರೂಢ ಪ್ರಶ್ನೆ, ಸ್ವರ್ಣ ಪ್ರಶ್ನೆ, ಇಡುವುದರೊಂದಿಗೆ ಲಕ್ಷಾಂತರ ಜಾತಕ ಪರಿಶೀಲನೆ ಮತ್ತು ರಚನೆ ಮಾಡಿ ದೇಶ ವಿದೇಶದಲ್ಲೆಡೆ ಜನಾನುರಾಗಿಯಾಗಿದ್ದಾರೆ.






