ಕರಾವಳಿ
ಆನಂದ್ ಸಿ. ಕುಂದರ್ 75 ರ ‘ಆನಂದಾಮೃತ’ ಸಂಭ್ರಮ

Views: 1
ಕೋಟ: ಮತ್ಸ್ಯೋದ್ಯಮಿ, ಗೀತಾನಂದ ಪೌಂಡೇಶನ್ ಪ್ರವತ೯ಕರಾದ ಆನಂದ್ ಸಿ. ಕುಂದರ್ ಅವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಆನಂದಾಮೃತ ಕಾರ್ಯಕ್ರಮ ಕೋಟ ಪಡುಕೆರೆಯಲ್ಲಿ ಎ. 26 ರಂದು ನಡೆಯಿತು.
ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ. ಮೋಹನ್ ಆಳ್ವ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವತ೯ಕ ಡಾ. ಜಿ. ಶಂಕರ್, ವೇದಮೂತಿ೯ ಮಧುಸೂದನ ಬಾಯರಿ, ರಾಮಪ್ರಸಾದ ಅಡಿಗ, ಕಟ್ಕೇರಿ ಪ್ರೇಮಾನಂದ ಶೆಟ್ಟಿ, ವೆಲೇರಿಯನ್ ಮೆನೇಜಸ್, ಕೋಟ ಇಬ್ರಾಹಿಂ ಸಾಹೇಬ್, ತಿಮ್ಮ ಪೂಜಾರಿ, ರಾಜೇಶ್ ಕೆ. ಸಿ, ರಾಘವೇಂದ್ರ ಕಾಂಚನ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ನರೇಂದ್ರ ಕುಮಾರ್ ಕೋಟ ಕಾಯ೯ಕ್ರಮ ನಿರೂಪಿಸಿದರು.






