ಯುವಜನ

ಪಕ್ಕದ ಮನೆಯ ಬಾಲಕನನ್ನು ಕೊಂದು ಶವವನ್ನು ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟ ಮಹಿಳೆ !

Views: 208

ಚೆನ್ನೈ: ಮಹಿಳೆಯೊಬ್ಬರು ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ಶವವನ್ನು ವಾಷಿಂಗ್‌ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂನ ಆತುಕುರಿಚಿ ಗ್ರಾಮದಲ್ಲಿ ನಡೆದಿದೆ.

ಮಹಿಳೆ ಕ್ರೌರ್ಯಕ್ಕೆ ಬಲಿಯಾದ ಬಾಲಕನನ್ನು ಕಟ್ಟಡ ಕಾರ್ಮಿಕ ವಿಘ್ನೇಶ್‌ ಅವರ ಪುತ್ರ ಸಂಜಯ್‌ ಎಂದು ಗುರುತಿಸಲಾಗಿದೆ.

ತಂಗವಾಳ್‌ ಎಂಬಾಕೆ 3 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಮಹಿಳೆ, ಆ ಬಾಲಕನ ತಂದೆಯೊಂದಿಗೆ ದ್ವೇಷವಿದ್ದ ಹಿನ್ನೆಲೆಯಲ್ಲಿ ಮಗುವನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಸಂಜಯ್‌ ಬೆಳಗ್ಗೆ ಮನೆಯ ಬಳಿ ಆಟವಾಡುತ್ತಿದ್ದ, ಆದರೆ ಬಾಲಕನ ತಾಯಿ ರವ್ಯಾ ಮಗನನ್ನು ಅಂಗನವಾಡಿಗೆ ಕರೆದೊಯ್ಯಬೇಕೆಂದು ಹುಡುಕಾಡಿ ದಾಗ ಎಲ್ಲೂ ಕಾಣಿಸಿರಲಿಲ್ಲ.

ವಿಘ್ನೇಶ್‌ ರಾಧಾಪುರಂ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸ್‌‍ ಸಿಬ್ಬಂದಿ ಆತನ ಬೀದಿಯಲ್ಲಿರುವ ಮನೆಗಳಲ್ಲಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂಜಯ್‌ ಅವರ ಮತದೇಹವನ್ನು ಗೋಣಿಚೀಲದಲ್ಲಿ ಸುತ್ತಿ ತಂಗವಾಳ್‌ ಅವರ ಮನೆಯಲ್ಲಿರುವ ವಾಷಿಂಗ್‌ ಮೆಷಿನ್‌‍ನಲ್ಲಿ ಬಚ್ಚಿಟ್ಟಿದ್ದನ್ನು ಪೊಲೀಸ್‌‍ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಪೊಲೀಸರು ಶವವನ್ನು ವಶಪಡಿಸಿ ಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್‌‍ ವರಿಷ್ಠಾಧಿಕಾರಿ ಎನ್‌ ಸಿಲಂಬರಸನ್‌, ಉಪ ಪೊಲೀಸ್‌‍ ವರಿಷ್ಠಾಧಿಕಾರಿ ಆರ್‌ ಯೋಗೇಶ್‌ ಕುಮಾರ್‌ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ವಿಚಾರಣೆ ನಡೆಸಿದರು.

ಪೊಲೀಸರು ತಂಗವಾಳ್‌ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ. ವಿಘ್ನೇಶ್‌ ಮತ್ತು ತಂಗವಾಳ್‌ ನಡುವೆ ಹಿಂದಿನ ದ್ವೇಷವಿತ್ತು ಎಂದು ಮೂಲಗಳು ತಿಳಿಸಿವೆ. ಈ ದ್ವೇಷದ ಹಿನ್ನೆಲೆಯಲ್ಲಿ ತಂಗವಾಳ್‌ ಬಾಲಕನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕೊಲೆಯಲ್ಲಿ ಬೇರೆಯವರ ಕೈವಾಡವಿದೆಯೇ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಪಘಾತದಲ್ಲಿ ತಂಗವಾಳ್‌ ತನ್ನ ಮಗನನ್ನು ಕಳೆದುಕೊಂಡಿದ್ದರಿಂದ ಆಕೆಯ ಮಾನಸಿಕ ಸ್ಥಿತಿ ಅಷ್ಟು ಸರಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

Related Articles

Back to top button
error: Content is protected !!