ಕರಾವಳಿ
ಕೋಟೇಶ್ವರ ಪ್ರಾಂಶುಪಾಲರ ಮನೆಯಲ್ಲಿ ಕುಂದಾಪುರ ಬೋರ್ಡ್ ಹೈಸ್ಕೂಲಿನ ಅಟೆಂಡರ್ ಸಾವು

Views: 359
ಕುಂದಾಪುರ:ಕುಂದಾಪುರ ಬೋರ್ಡ್ ಹೈಸ್ಕೂಲ್ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ಕೋಟೇಶ್ವರ ಗ್ರಾಮದ ಪುರಾಣಿಕ ರಸ್ತೆಯಲ್ಲಿರುವ ಪ್ರಾಂಶುಪಾಲರ ಮನೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾವ್ರಾಡಿ ಗ್ರಾಮದ ಪ್ರದೀಪ ಮೊಗವೀರ (44) ಮೃತಪಟ್ಟವರು.
ಪ್ರಾಂಶುಪಾಲರು ಮನೆಯಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಇವರು ಅಲ್ಲಿಗೆ ಮಲಗಲು ಹೋಗುತ್ತಿದ್ದು, ಯಾವುದೋ ಕಾಯಿಲೆ ಉಲ್ಬಣ ಗೊಂಡು ಬಚ್ಚಲು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಮೃತರ ಸಹೋದರ ರಾಜೇಶ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೃತರು ಉತ್ತಮ ಕಲಾವಿದರಾಗಿದ್ದು, ಯಕ್ಷಗಾನ,ನಾಟಕ,ನಿರೂಪಕ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಅವರು ತಂದೆ, ತಾಯಿ, ತಂಗಿಯನ್ನು ಅಗಲಿದ್ದಾರೆ.






