ಕರಾವಳಿ

ಕಾರ್ಕಳ:ಯುವತಿಗೆ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ  ಅತ್ಯಾಚಾರ: ಬಿಜೆಪಿ ಕಾರ್ಯಕರ್ತ ಸೆರೆ

Views: 327

ಉಡುಪಿ, ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಭಯ್ ಬಂಧಿತ ಆರೋಪಿಯಾಗಿದ್ದು,ಈತ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ, ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ.

ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್‌ಗೆ ಡ್ರಗ್ಸ್ ಪೂರೈಕೆ ಮಾಡಿರುವುದು ತಿಳಿದು ಬಂದಿದ್ದು,ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದ 3ನೇ ಆರೋಪಿ ಅಭಯ್ ಫೇಸ್‌ಬುಕ್‌ನಲ್ಲಿ ಶಾಸಕ ಸುನೀಲ್‌ಕುಮಾರ್ ಫೋಟೋ ಹಾಕಿಕೊಂಡಿದ್ದು, ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.

ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್‌ಗೆ ಡ್ರಗ್ಸ್ ಒದಗಿಸಿದ್ದ.ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Related Articles

Back to top button