ಇಂಡಿಯನ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ ಭರ್ತಿಗೆ ಅರ್ಜಿ ಆಹ್ವಾನ

Views: 67
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ಬ್ಯಾಂಕ್ ಅಧಿಕೃತವಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ತಕ್ಷಣ ವೆಬ್ಸೈಟ್ https://www.indianbank.in/ ಗೆ ಭೇಟಿ ನೀಡಿ ಅಪ್ಲೇ ಮಾಡಬೇಕೆಂದು ತಿಳಿಸಲಾಗಿದೆ.
ಇಂಡಿಯನ್ ಬ್ಯಾಂಕ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಪ್ಲೇ ಮಾಡಲು ಮುಂದಿನ ತಿಂಗಳು ಅಂದರೆ ಸೆಫ್ಟೆಂಬರ್ 2 ಕೊನೆ ದಿನಾಂಕವಾಗಿದೆ. ಈಗಾಗಲೇ ಅರ್ಜಿ ಹಾಕಲಾಗುತ್ತಿದೆ. ಹೀಗಾಗಿ ಇನ್ನೇನು ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿದ್ದು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲೂ 35 ಪೋಸ್ಟ್ಗಳು ಇದ್ದು ಅಪ್ಲೇ ಮಾಡಬಹುದು. ಯಾವ ರಾಜ್ಯಕ್ಕೆ ಅರ್ಜಿ ಹಾಕುತ್ತೇವೆ ಆ ರಾಜ್ಯದ ಭಾಷೆಯನ್ನು ನಿರ್ಗಳವಾಗಿ ಮಾತನಾಡಲು ಬರಬೇಕು ಎಂದು ಹೇಳಲಾಗಿದೆ.
ಇಂಡಿಯನ್ ಬ್ಯಾಂಕ್ಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ಸ್ಯಾಲರಿ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಹುದ್ದೆಯ ಹೆಸರು— ಲೋಕಲ್ ಬ್ಯಾಂಕ್ ಆಫೀಸರ್ (ಸ್ಕೇಲ್-1)
ಒಟ್ಟು ಖಾಲಿ ಹುದ್ದೆಗಳು- 300 (ಕರ್ನಾಟಕ- 35)
ಈ ಹುದ್ದೆಗೆ ಸಂಬಳ- 48,400 ರೂ.ಗಳು ತಿಂಗಳಿಗೆ
ಅಪ್ಲೇ ಮಾಡುವುದು- ಆನ್ಲೈನ್ ಮೂಲಕ ಮಾತ್ರ
ಅರ್ಜಿಗೆ ಎಷ್ಟು ಶುಲ್ಕ- ಜನರಲ್- ₹1000, ಎಸ್ಸಿ, ಎಸ್ಟಿ- ₹175
ಹುದ್ದೆಗೆ ಆಯ್ಕೆ ಹೇಗೆ- ಆನ್ಲೈನ್ ಪರೀಕ್ಷೆ, ಸಂದರ್ಶನ
ಅಪ್ಲೇ ಮಾಡಲು ಲಿಂಕ್- https://ibpsonline.ibps.in/iblbojul24/
ಅಭ್ಯರ್ಥಿ ವಿದ್ಯಾರ್ಹತೆ- ಪದವಿ ಪೂರ್ಣಗೊಳಿಸಿರಬೇಕು
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜುಲೈ 1, 2024ಕ್ಕೆ 20 ವರ್ಷದಿಂದ 30 ವರ್ಷದೊಳಗಿನವರು ಆಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ವಿಶೇಷಚೇತನರಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ಇದೆ.
ಕರ್ನಾಟಕ- 35 ಹುದ್ದೆಗಳು
ಆಂಧ್ರ, ತೆಲಂಗಾಣ- 50 ಹುದ್ದೆಗಳು
ಮಹಾರಾಷ್ಟ್ರ- 40 ಹುದ್ದೆಗಳು
ಗುಜರಾತ್ 15 ಹುದ್ದೆಗಳು
ತಮಿಳುನಾಡು/ಪುದುಚೇರಿ; 160 ಹುದ್ದೆಗಳು