ಆರ್ಥಿಕ

ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಯುವತಿ!

Views: 70

ಕನ್ನಡ ಕರಾವಳಿ ಸುದ್ದಿ:ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತಿಗೆ ಟ್ರೇಡಿಂಗ್ ಇನ್‌ವೆಸ್ಟ್‌ಮೆಂಟ್ ಮಾಡಿದ ಬನ್ನೂರಿನ ಯುವತಿ 4.90 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾ.1ರಂದು ಇನ್‌ಸ್ಟಾಗ್ರಾಂ ಖಾತೆಯಿಂದ ಇನ್‌ವೆಸ್ಟ್ ಟಾಸ್ಕ್ ಮಾಡಲು ಯುಪಿಐಐಡಿಗೆ 10 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದು ಹೀಗಾಗಿ ಆಕೆ ಹಣವನ್ನು ಫೋನ್ ಪೇ ಮಾಡಿದ್ದಾರೆ.

ಇನ್‌ವೆಸ್ಟ್ ಟ್ರೇಡ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮುಖಾಂತರ ಮೆಸೇಜ್ ಕಳಿಸಿದ್ದು, ಈ ವೇಳೆ ಯುವತಿಗೆ 10 ಸಾವಿರ ರೂ. ಹಾಕಿದರೆ 2 ಲಕ್ಷ ರೂ. ಗಳಿಸಬಹುದು ಎಂಬ ಸಂದೇಶ ಬಂದಿತ್ತು. ಇದಾದ ಅನಂತರ ಯುವತಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಒಟ್ಟು 4,90,997 ರೂ. ಪಾವತಿ ಮಾಡಿದ್ದರು. ಆದರೆ ಯುವತಿಯ ಖಾತೆಗೆ ಹಣ ಬಾರದೆ ಇರುವುದರಿಂದ ವಂಚನೆಗೆ ಒಳಗಾದ ಯುವತಿ ಮಂಗಳೂರು ಸೆನ್ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Related Articles

Back to top button
error: Content is protected !!