ಕರಾವಳಿ

ಸ್ವಾತಂತ್ರ್ಯ ಧ್ವಜ ಅವರೋಹಣದ ವೇಳೆ ಸ್ತಂಭಕ್ಕೆ ವಿದ್ಯುತ್ ತಗುಲಿ ಚರ್ಚ್ ಫಾದರ್ ಸಾವು

Views: 86

ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಚರ್ಚ್ ಫಾದರ್ ಅವರು ಸ್ವಾತಂತ್ರ್ಯ ದಿನದ ದ್ವಜ ಅವರೋಹಣ ಮಾಡುತ್ತಿರುವಾಗ ವಿದ್ಯುತ್ ತಗುಲಿ ಇನ್‌ಫೆಂಟ್‌ ಸೈಂಟ್‌ ಜೀಸಸ್‌ ಇಗರ್ಜಿಯ ಫಾದರ್‌ ಶಿನ್ಸ್‌ (30) ಸಾವಿಗೀಡಾಗಿದ್ದಾರೆ.ಫಾದರ್ ಜೊತೆ ಇದ್ದವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗಸ್ಟ್. 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಆರೋಹಣ ಮಾಡಿದ್ದ ರಾಷ್ಟ್ರ ಧ್ವಜವನ್ನು ಸಂಜೆ ಆರು ಗಂಟೆಗೆ ಕೆಳಗಿಳಿಸುವಾಗ ಧ್ವಜಸ್ತಂಬದ ವಿದ್ಯುತ್ ಕಂಬ ವಾಲಿದ್ದು ವಿದ್ಯುತ್ ತಂತಿಗೆ ಬಿದ್ದಿದೆ ತ್ರಿವರ್ಣ ಧ್ವಜವನ್ನು ಮಡಚಿ ಕಟ್ಟುತ್ತಿದ್ದ  ವೇಳೆ ಈ ಘಟನೆ ಸಂಭವಿಸಿದೆ.

 

 

 

 

 

Related Articles

Back to top button