ಕರಾವಳಿ

ಶಿರೂರು ಗುಡ್ಡ ಕುಸಿತ; 29 ದಿನಗಳ ಬಳಿಕ ಡ್ರೈವರ್ ಅರ್ಜುನ್ ಪತ್ತೆಗಾಗಿ ಈಶ್ವರ್ ಮಲ್ಪೆ  ನೇತೃತ್ವದ ತಂಡದ ಮತ್ತೆ ಕಾರ್ಯಾಚರಣೆಗೆ

Views: 141

ಜುಲೈ 16ರಂದು ಶಾಂತವಾಗಿದ್ದ ಉತ್ತರ ಕನ್ನಡದ ಶಿರೂರು ಗುಡ್ಡ ರಾಕ್ಷಸ ರೂಪ ತಾಳಿದ ದಿನ.  ಅದೆಷ್ಟೋ ಮಂದಿಯನ್ನ ಬಲಿ ಪಡೆದುಕೊಂಡ ದಿನ. ಅಂದು ಗುಡ್ಡದ ಭೂತದ ಪ್ರತಾಪಕ್ಕೆ ಅಕ್ಷರಶಃ ಹಲವರು ಮಣ್ಣಿನಡಿ ಉಸಿರು ನಿಲ್ಲಿಸಿದ್ರು. ಈಗಾಗಲೇ 8 ಮಂದಿಯ ಮೃತದೇಹ ಸಿಕ್ಕಿದ್ರೆ, ಇನ್ನೂ ಮೂವರ ಪತ್ತೆಯಾಗಿಲ್ಲ. ಲಾರಿ ಪತ್ತೆಯಾದ್ರೂ ಲಾರಿ ಚಾಲಕ ಅರ್ಜುನ್ ಸುಳಿವೇ ಸಿಕ್ಕಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಶೋಧ ಕಾರ್ಯ ಪುನಾರಂಭಿಸಲಾಗ್ತಿದೆ

ಮಳೆಯಾರ್ಭಟ ಜಾಸ್ತಿಯಿದ್ದ ಕಾರಣ ಶೋಧ ಕಾರ್ಯಕ್ಕೆ ಸಾಕಷ್ಟು ತೊಂದರೆಯಾಗ್ತಾಯಿತ್ತು. ಅದಲ್ಲದೇ, ಶೋಧಕಾರ್ಯ ನಡೆಸುವ ಸಂದರ್ಭದಲ್ಲಿ ಕಲ್ಲು, ಮಣ್ಣು, ಮರದ ತುಂಡು ಪತ್ತೆಯಾಗಿದ್ದು ಸಾಕಷ್ಟು ಅಡೆ ತಡೆಗಳು ಎದುರಾಗಿದ್ವು. ಹೀಗಾಗಿ ಜುಲೈ 28ರಂದು ಕಾರ್ಯಚರಣೆ ಸ್ಥಗಿತ ಆಗಿತ್ತು.

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ವರುಣನ ಆರ್ಭಟ ಕೊಂಚ ತಗ್ಗಿದಂತೆ ಕಾಣ್ತಿದೆ. ಹೀಗಾಗಿ, ಇಂದು ಈಶ್ವರ್ ಮಲ್ಪೆ ನೇತೃತ್ವದ ತಂಡದ ಮತ್ತೆ ಕಾರ್ಯಾಚರಣೆಗೆ ಇಳಿಯಲಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಈಶ್ವರ್ ಮಲ್ಪೆ ತಂಡ ಇಂದು ಶೋಧ ಕಾರ್ಯಕ್ಕೆ ಧುಮುಕಲಿದೆ. ನದಿಗೆ ಇಳಿದು ಲಾರಿ ಮೇಲೆತ್ತುವ ಕಾರ್ಯದ ಜೊತೆಗೆ ಲಾರಿ ಚಾಲಕ ಅರ್ಜುನ್ ಸೇರಿ ಜಗನ್ನಾಥ್, ಲೋಕೇಶ್ಗಾಗಿ ಹುಡುಕಾಟ ನಡೆಯಲಿದೆ.

Related Articles

Back to top button