ಕರಾವಳಿ
ಕುಂದಾಪುರ: ಬೀಜಾಡಿಯ ಸರ್ವಿಸ್ ರಸ್ತೆಯಲ್ಲಿ ಕಾರು -ಬೈಕ್ ಡಿಕ್ಕಿ :ಸಹೋದರರಿಬ್ಬರಿಗೆ ಗಾಯ

Views: 169
ಕುಂದಾಪುರ: ಬೀಜಾಡಿಯ ರಾ.ಹೆ. 66ರ ಸರ್ವಿಸ್ ರಸ್ತೆಯಲ್ಲಿ ಏಕಾಏಕಿ ನಿಲ್ಲಿಸಿದ ಕಾರು ಒಮ್ಮೆಲೇ ಬಾಗಿಲು ತೆಗೆದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ತಾಗಿ, ಬೈಕ್ ಪಲ್ಟಿಯಾಗಿ ಸಹೋದರರಿಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬೈಕ್ ಸವಾರ ಗೋಪಾಡಿ ನಿವಾಸಿಯಾದ ಸುಜನ್ (20), ಸಹೋದರನಾದ ಸುವಾನ್ (17) ಗಾಯಗೊಂಡವರು.
ಘಟನೆಯಲ್ಲಿ ಸುಜನ್ ಗಂಭೀರ ಗಾಯಗೊಂಡಿತ್ತು ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುವಾನ್ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಬ್ರಹ್ಮಾವರ ಕುಂಜಾಲಿನ ಮಹೇಶ್ (35) ಅವರು ಪ್ರತಿ ದೂರು ನೀಡಿದ್ದು, ಬೀಜಾಡಿಯಲ್ಲಿ ಚಹಾ ಕುಡಿಯಲೆಂದು ಕಾರು ನಿಲ್ಲಿಸಿದ್ದು, ಈ ವೇಳೆ ಬೈಕ್‌ವೊಂದು ವೇಗವಾಗಿ ಬಂದು ಕಾರಿನ ಮುಂದಿನ ಬಾಗಿಲಿಗೆ ಢಿಕ್ಕಿಯಾಗಿ, ಕಾರಿನ ಬಾಗಿಲು ಜಖಂಗೊಂಡಿರುವುದಾಗಿ ತಿಳಿಸಿದ್ದಾರೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಎರಡು ಕಡೆಯವರ ದೂರಿನಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.