ಕರಾವಳಿ

ಬೀಜಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಟಿಪ್ಪರ್ ಡಿಕ್ಕಿ, ಕಾರು ನಜ್ಜುಗುಜ್ಜು

Views: 1178

play-sharp-fill

ಕೋಟೇಶ್ವರ : ಬೀಜಾಡಿ ರಾಷ್ಟ್ರೀಯ ಹೆದ್ದಾರಿ- 66 ರಲ್ಲಿ ಕಾರಿಗೆ ಟಿಪ್ಪರ್ ಗುದ್ದಿದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ.

ಬೀಜಾಡಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಹೋಗುತ್ತಿದ್ದ ಕಾರು ಕುಂಭಾಸಿಯಿಂದ ಕುಂದಾಪುರದ ಕಡೆಗೆ ಅತಿವೇಗವಾಗಿ ಬಂದ ಟಿಪ್ಪರ್ ಕಾರಿಗೆ ಗುದ್ದಿದ ಪರಿಣಾಮ ಕಾರು ಸಂಪೂರ್ಣ ಹಾನಿಯಾಗಿದೆ. ಟಿಪ್ಪರ್ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ನಿಂತಿದೆ.ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

 

Related Articles

Back to top button