ಕರಾವಳಿ
ಕುಂದಾಪುರ: ಕುಂಭಾಸಿಯಲ್ಲಿ ನಿರ್ಮಾಣ ಹಂತದ 8ನೇ ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು

Views: 353
ಕುಂದಾಪುರ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾಂಕ್ರೀಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.
ಮೃತರನ್ನು ಕಾರ್ಕಳದ ಕಾರ್ತಿಕ್ ರಾವ್ (46) ಎಂದು ಗುರುತಿಸಲಾಗಿದೆ.
ಕುಂಭಾಸಿ ರಾಷ್ಟ್ರೀಯ ಹೆದ್ದಾರಿ ಸಮೀಪ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಹತ್ತಿರ ನಿರ್ಮಾಣ ಹಂತದ ಅಪಾರ್ಟ್ಮೆಂಟಿನ ಕಾಂಕ್ರೀಟಿಕರಣ ಕೆಲಸದ ಉಸ್ತುವಾರಿ ನೋಡಿಕೊಳ್ಳುವ ಬಗ್ಗೆ ಕೆಲಸಕ್ಕೆ ಹೋಗಿ ಅಲ್ಲಿ ಕೆಲಸದ ಉಸ್ತುವಾರಿ ನೋಡಿಕೊಂಡಿರುವಾಗ ಬೆಳಿಗ್ಗೆ 08:30 ಗಂಟೆಗೆ ನಿರ್ಮಾಣ ಹಂತದ ಅಪಾರ್ಟಮೆಂಟನ 8 ನೇ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ನೆಲಕ್ಕೆ ಬಿದ್ದು ತೀವೃವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಮೃತರ ಪುತ್ರ ಕೀರ್ತಿವಧನ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2024 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ .