ಕರಾವಳಿ
ಗಂಗೊಳ್ಳಿ:ದನ- ಕರುಗಳಿಗೆ ಹುಲ್ಲು ತರುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮಹಿಳೆ ಸಾವು

Views: 64
ಗಂಗೊಳ್ಳಿ: ಕುಂದಾಪುರ ಸಮೀಪ ಗಂಗೊಳ್ಳಿಯಲ್ಲಿ ದನ- ಕರುಗಳಿಗೆ ಹುಲ್ಲು ತರುವಾಗ ಆಕಸ್ಮಿಕವಾಗಿ ಮಹಿಳೆಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಹೊಸಾಡು ಗ್ರಾಮದ ಕೃಷಿಕರಾದ ಕುಂಬ್ರಿ ದೇವಿ (68) ಮೃತಪಟ್ಟವರು
ಮನೆಯ ದನ ಕರುಗಳಿಗೆ ಹುಲ್ಲು ತರಲು ಮನೆಯ ಹತ್ತಿರದ ಕೆರೆಯ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ಪುತ್ರ ಪ್ರದೀಪ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.