ಪ್ರಕೃತಿಯ ರೌದ್ರ ನರ್ತನಕ್ಕೆ ಇಡೀ ಕುಟುಂಬವೇ ಬಲಿ..ವಿವಾಹ ನಿಶ್ಚಯಗೊಂಡ ಮಗಳು ಅನಾಥೆ..!

Views: 367
ಕೇರಳ: ಶಿವಣ್ಣ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳಿಗೆ ಇನ್ನೇನು ಮದುವೆ ಮಾಡಿಸಬೇಕೆಂದು ವಿವಾಹ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದರು. ಡಿ. 26ಕ್ಕೆ ವಿವಾಹ ಮಾಡುವುದಾಗಿ ನಿಶ್ಚಯ ಮಾಡಲಾಗಿತ್ತು.ಆದರೆ ವಯಾನಾಡ್ ಅಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಪ್ರಕೃತಿಯ ರೌದ್ರ ನರ್ತನಕ್ಕೆ ಇಡೀ ಕುಟುಂಬವೇ ಬಲಿಯಾಗಿದೆ. ಮದುವೆ ನಿಶ್ಚಿತ ಮಗಳನ್ನೊಬ್ಬಳನ್ನು ಬಿಟ್ಟು ಉಳಿದವೆರೆಲ್ಲರೂ ಉಂಟಾದ ಭೀಕರ ಭೂಕುಸಿತದಲ್ಲಿ ಮಣ್ಣು ಪಾಲಾಗಿದ್ದಾರೆ.
ಇದೀಗ ಅಜ್ಜಿ,ಅಜ್ಜಿ, ತಂದೆ, ತಾಯಿ, ಸಹೋದರಿಯನ್ನು ಕಳೆದುಕೊಂಡ ಮಗಳು ಅನಾಥೆಯಾಗಿದ್ದಾಳೆ.
ಭೀಕರ ದುರಂತದಲ್ಲಿ ಆಂತ್ಯವನ್ನು ಕಂಡ ಕುಟುಂಬಗಳ ಒಂದೊಂದು ಕಥೆಯನ್ನು ಕೇಳಿದರೆ ಮನಸ್ಸು ಭಾರವಾಗುತ್ತದೆ. ಹಿರಿಯ ಮಗಳ ಮದುವೆಗೆ ಇನ್ನೇನು ನಾಲ್ಕು ತಿಂಗಳುಗಳು ಬಾಕಿ ಇದ್ದವು. ಅದು ಮನೆಯವರ ದೊಡ್ಡ ಕನಸಾಗಿತ್ತು. ಏನಾದರು ಮಳೆ ಬಂದರೆ ಅದಕ್ಕಾಗಿ ಸಿದ್ಧತೆ ಕೂಡಾ ಮಾಡಿಕೊಂಡಿದ್ದರು.
ಮನೆಯವರೆಲ್ಲರನ್ನು ಕಳೆದುಕೊಂಡ ಶೃತಿಗೆ ತನ್ನ 19 ವರ್ಷದ ತಂಗಿ ಶ್ರೇಯಾ ಮೃತದೇಹ ಸಿಕ್ಕಿದೆ. ತಂಗಿಯ ಮೃತದೇಹ ಕಂಡಂತೆ ಶೃತಿ ಕಣ್ಣೀರು ಸುರಿಸಿದ್ದಾಳೆ. ತನ್ನವರಿಗಾಗಿ ಹುಡುಕಾಡಿದ್ದಾಳೆ. ಅಮ್ಮ, ಅಪ್ಪನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದಾಳೆ. ಶೃತಿ ಕೋಯಿಕ್ಕೋಡ್ನ ಮಿವ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೀಗ ತನ್ನವರನ್ನು ಕಳೆದುಕೊಂಡು ಶೃತಿಗೆ ದಿಕ್ಕು ತೋಚದಂತಾಗಿದೆ.