ಕರಾವಳಿ

ಉಡುಪಿ:ಬ್ರಹ್ಮಗಿರಿಯ ಅಪಾರ್ಟ್‌ಮೆಂಟ್‌ ನಲ್ಲಿ ನಾಲ್ವರು ಮುಸುಕುಧಾರಿಗಳಿಂದ ದರೋಡೆಗೆ ಯತ್ನ..!

Views: 240

ಉಡುಪಿ: ಇಲ್ಲಿನ ಬ್ರಹ್ಮಗಿರಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಾಲ್ವರು ಮುಸುಕುಧಾರಿಗಳು ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ.

ಸಿಸಿ ಟಿವಿ ದೃಶ್ಯದಲ್ಲಿ ದಾಖಲಾದಂತೆ ನಾಲ್ವರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಅಪಾರ್ಟ್‌ಮೆಂಟ್‌ನೊಳಗೆ ನುಗ್ಗಲು ಮುಂದಾಗಿದ್ದಾರೆ. ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ರಾಡ್‌ಗಳನ್ನು ಹಿಡಿದು ದುಷ್ಕರ್ಮಿಗಳ ಈ ತಂಡ ದರೋಡೆಗೆ ಯತ್ನಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಳನುಗ್ಗಲು ವಿಫಲವಾದ ಹಿನ್ನಲೆಯಲ್ಲಿ ವಾಪಾಸು ತೆರಳಿದ್ದಾರೆ. ಒಂದೇ ಬಡಾವಣೆಯ ಒಟ್ಟು ಮೂರು ಅಪಾರ್ಟ್‌ಮೆಂಟ್‌ಗಳಲ್ಲಿ ಈ ತಂಡ ದರೋಡೆಗೆ ಯತ್ನಿಸಿತ್ತು ಎಂದು ತಿಳಿದುಬಂದಿದೆ.

Related Articles

Back to top button