ಉತ್ತರ ಕನ್ನಡ: ಹಗ್ಗ ಕೈ ಜಾರಿ ಕೊಚ್ಚಿ ಹೋಗುತ್ತಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆಯವರನ್ನು ರಕ್ಷಿಸಿದ ರಕ್ಷಣಾ ತಂಡ!

Views: 270
ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಹಚ್ಚಲು ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಶನಿವಾರ ನೀರಿನಲ್ಲಿ ಇಳಿದಿದ್ದ ಈಶ್ವರ್ ಮಲ್ಪೆ ಅವರ ಕೈನಲ್ಲಿದ್ದ ಹಗ್ಗ ಜಾರಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಕೂಡಲೇ ಅಲ್ಲೇ ಇದ್ದ ರಕ್ಷಣಾ ತಂಡಗಳು ಈಶ್ವರ್ ಮಲ್ಪೆ ಅವರನ್ನು ಅದೃಷ್ಟವಶಾತ್ ಕಾಪಾಡಿದ್ದಾರೆ.
ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ. ಸ್ಥಳದಲ್ಲಿ ನೌಕಾಪಡೆ ಸೇರಿದಂತೆ ಮಿಲಿಟರಿ ಪಡೆಗಳು ಕಾರ್ಯಾಚರಣೆ ಮುಂದುವರಿಸಿದೆ.
ಕೇರಳ ಮೂಲದ ಅರ್ಜುನ್ ಲಾರಿ ಸಮೇತ ನದಿಯಲ್ಲಿ ಕೊಚ್ಚಿ ಹೋಗಿರುವ ಮಾಹಿತಿ ಇತ್ತು. ಹೀಗಾಗಿ ದೆಹಲಿಯಿಂದ ವಿಶೇಷ ತಜ್ಞರ ತಂಡವು ಕೂಡ ಎಂಟ್ರಿ ಕೊಟ್ಟಿತ್ತು. ಬಳಿಕ ಗಂಗಾವಳಿ ನದಿಯಲ್ಲಿ ಅತ್ಯಾಧುನಿಕ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮತ್ತೊಂದೆಡೆ ಎಲೆನಾ ಎಂಬ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಂ ಬಳಸಿ ಶೋಧ ನಡೆಸಲಾಗಿತ್ತು. ಆದರೂ ಕೂಡ ಕೇರಳ ಮೂಲದ ಅರ್ಜುನ್ ಇನ್ನೂ ಪತ್ತೆಯಾಗಿಲ್ಲ.