ಕರಾವಳಿ
ಕುಂದಾಪುರ: ಅಂದರ್-ಬಹರ್ ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ :6 ಮಂದಿ ವಶಕ್ಕೆ

Views: 110
ಕುಂದಾಪುರ: ಹಟ್ಟಿಯಂಗಡಿ ಗ್ರಾಮದ ಕರ್ಕಿ ಎಂಬಲ್ಲಿ ಸರಕಾರಿ ಹಾಡಿಯಲ್ಲಿ ನಡೆಯುತ್ತಿದ್ದ ಅಂದರ್-ಬಹರ್ ಇಸ್ಪೀಟ್ ಜುಗಾರಿ ಅಡ್ಡೆಗೆ ಗ್ರಾಮಾಂತರ ಠಾಣೆಯ ಪಿಎಸ್ಐ ಭೀಮಾಶಂಕರ ಸಿನ್ನೂರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಮಂಜುನಾಥ, ಸದಾನಂದ, ರವೀಂದ್ರ, ಪ್ರಸನ್ನ, ಗಿರೀಶ್, ಸತೀಶ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 1600 ರೂ. ನಗದು ಹಾಗೂ ಇಸ್ಪೀಟ್ ಎಲೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.