ಕರಾವಳಿ
ಸೇತುವೆ ಸಮೀಪ ವಾಹನ ನಿಲ್ಲಿಸಿ ನಾಪತ್ತೆಯಾದ ಯುವಕನ ಶವ ಹೊಳೆಯಲ್ಲಿ ಪತ್ತೆ

Views: 115
ಪುತ್ತೂರು: ಪುತ್ತೂರು-ಸವಣೂರು ರಸ್ತೆಯ ಸರ್ವೆಯ ತುಂಬಿ ಹರಿಯುತ್ತಿದ್ದ ಗೌರಿ ಹೊಳೆಯ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ಮಹೀಂದ್ರ ಶೋರೂಂ ನ ಉದ್ಯೋಗಿ, ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡರವರ ಪುತ್ರ ಸನ್ಮಿತ್ (21) ಮೃತಪಟ್ಟವರು.
ಇವರು ಜುಲೇ 19ರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಬಳಿಕ ತಡ ರಾತ್ರಿ ಹುಡುಕಾಟ ನಡೆಸಿದಾಗ, ಗೌರಿ ಹೊಳೆ ಸೇತುವೆ ಬಳಿ ಸನ್ಮಿತ್ ರವರ ಡಿಯೋ ಸ್ಕೂಟರ್ ಹಾಗೂ ಮೊಬೈಲ್ ಫೋನ್, ಪರ್ಸ್, ಹೆಲ್ಮೆಟ್, ಟಿಫಿನ್ ಬಾಕ್ಸ್ ಪತ್ತೆಯಾಗಿತ್ತು. ಈ ಎಲ್ಲ ವಸ್ತುಗಳು ಪತ್ತೆಯಾದ ಗೌರಿ ಹೊಳೆ ಸೇತುವೆ ಬಳಿಯೇ ಮೃತದೇಹ ಪತ್ತೆಯಾಗಿದೆ. ಆತ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೋ..? ಎಂಬ ಸಂಶಯ ಮೂಡಿದ್ದರಿಂದ ಹೆಚ್ಚಿನ ವಿಚಾರಗಳು ತನಿಖೆಯಿಂದ ತಿಳಿದು ಬರಬೇಕಷ್ಟೆ.