ಕರಾವಳಿ

ಶಿರೂರು ಗುಡ್ಡ ಕುಸಿತ ಪ್ರಕರಣ:ನದಿಯಲ್ಲಿ ನೀರಿನಲ್ಲಿ ಸಿಕ್ತು ಟ್ಯಾಂಕರ್ ಚಾಲಕನ ಶವ

Views: 192

ಅಂಕೋಲಾ: ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ. ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ 45 ವರ್ಷದ ಮುರುಗನ್ ನೀರಿಗೆ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ.

ಮತ್ತೋರ್ವ ವ್ಯಕ್ತಿಯ ಮೃತದೇಹ ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಸಿಕ್ಕಿದೆ. ಇಲ್ಲಿಯವರೆಗೆ 7 ಮೃತದೇಹ ಸಿಕ್ಕಿದೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.

ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಕೂಡ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

Related Articles

Back to top button