ಕರಾವಳಿ

ಮಂಗಳೂರು:ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿರುವ ಇಬ್ಬರು ಕಾರ್ಮಿಕರ ತೀವ್ರ ಶೋಧ ಕಾರ್ಯಾಚರಣೆ

Views: 48

ಮಂಗಳೂರು: ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಗರದ ಬಲ್ಮಠ ರೋಡ್ ಸಮೀಪ ನಡೆದಿದೆ.

ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದ್ದು, ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು, ಎಸ್ ಡಿಆರ್ ಎಫ್ ಪಡೆಗಳು ದೌಡಾಯಿಸಿದ್ದು, ರಕ್ಷಣ ಕಾರ್ಯ ನಡೆಯುತ್ತಿದೆ.

ಇಬ್ಬರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಲ್ಮಠ ರಸ್ತೆ ಬದಿಯಲ್ಲಿ ಖಾಸಗಿ ನಿರ್ಮಾಣಕ್ಕೆ ಸಂಸ್ಥೆಗೆ ಸೇರಿದ ಜಾಗ ಇದಾಗಿದೆ. ಮಣ್ಣಿನಡಿ ಸಿಲುಕಿರುವ ಸಂತ್ರಸ್ತರನ್ನು ಬಿಹಾರ ಮೂಲದ ರಾಜ್ಕುಮಾರ್ ಹಾಗೂ ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ. ನಿರ್ಮಾಣ ಕಾಮಗಾರಿಯ ಒಂದು ಪಾರ್ಶ್ವದಲ್ಲಿ ಈ ಇಬ್ಬರೂ ಕಾರ್ಮಿಕರು ತಳಪಾಯದ ಗೋಡೆಗೆ ವಾಟರ್‌ ಪ್ರೂಫಿಂಗ್ ರಾಸಾಯನಿಕ ಸಿಂಪಡಿಸುತ್ತಿದ್ದ ವೇಳೆ ಆ ಭಾಗದ ಮೇಲ್ಭಾಗದಿಂದ ಭೂ ಕುಸಿತ ಉಂಟಾಗಿ ಅಲ್ಲಿ ಕಟ್ಟಲಾಗಿದ್ದ ತರ್ಪಾಲ್ ಮೇಲೆ ಬಿದ್ದು ಇಬ್ಬರೂ ಮಣ್ಣಿನಡಿ ಸಿಲುಕಿದ್ದರು.‌ ರಾಜ್‌ಕುಮಾರ್‌ನನ್ನು ಮಣ್ಣಿನಡಿಯಿಂದ ರಕ್ಷಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಬ್ಬರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

 

Related Articles

Back to top button
error: Content is protected !!