ಸಾಂಸ್ಕೃತಿಕ

ನ್ಯಾಯ ಏನಿದೆಯೋ ಅದೇ ಆಗುತ್ತೆ, ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ ಎಲ್ಲವೂ ಹಣೆಬರಹ: ದರ್ಶನ್ ಕುರಿತು ನಟ ಶಿವರಾಜ್ ಕುಮಾರ್ ಹೇಳಿಕೆ

Views: 82

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್  ಕೈದಿಯಾಗಿ ಜೈಲು ಸೇರಿದ್ದಾರೆ. ಈ ಬಗ್ಗೆ ಈಗಾಗಲೇ ಕನ್ನಡ ಚಿತ್ರರಂಗದ ತಾರೆಯರೆಲ್ಲಾ ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ.ಈಗಾಗಲೇ ಕಿಚ್ಚ ಸುದೀಪ್, ಉಪೇಂದ್ರ, ಶ್ರುತಿ, ಜಗ್ಗೇಶ್, ರಮ್ಯಾ, ರಚಿತಾ ರಾಮ್ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಸಿದ್ದಾರೆ.ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಕೆಲ ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ.

ಇದೀಗ ನಟ ಶಿವರಾಜ್‌ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ರೇಣುಕಾಸ್ವಾಮಿ ಪ್ರಕರಣದ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದರು. ಪೊಲೀಸರ ತನಿಖೆ ನಡೆಯುತ್ತಿದೆ. ಏನಾಗುತ್ತದೋ ನೋಡೋಣ ಎಂದಿದ್ದಾರೆ. “ಈ ರೀತಿ ಆಗುತ್ತದೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ. ಏನೇ ಮಾಡಿದರೂ ನಾವು ಮಾಡಿದ್ದು ಸರೀನಾ ಎಂದು ನಾವು ಯೋಚನೆ ಮಾಡಬೇಕು. ನೋವಾಗುತ್ತೆ. ಯಾಕಪ್ಪ ಹಿಂಗಾಯ್ತು ಅಂತ ಬೇಸರ ಆಗುತ್ತದೆ. ದರ್ಶನ್ ಬಗ್ಗೆ ಬೇಸರ ಆಗುತ್ತೆ. ನಾವು ಎಲ್ಲವನ್ನು ಎದುರಿಸಬೇಕು. ಇದು ಜೀವನದ ಒಂದು ಘಟ್ಟ

ಈಗಾಗಲೇ ತನಿಖೆ ನಡೆದಾಗಿದೆ. ಏನಾಗುತ್ತದೋ ನೋಡೋಣ. ಏನಾಗಬೇಕೋ ಅದೇ ಆಗುತ್ತದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ. ಇದರ ಮೇಲೆ ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ. ಎಲ್ಲವೂ ಹಣೆಬರಹ” ಎಂದು ಶಿವಣ್ಣ ಹೇಳಿದರು .

 

 

 

Related Articles

Back to top button
error: Content is protected !!