ರಿಷಬ್ ಶೆಟ್ಟಿ ಭೇಟಿಯಾಗಲು ಕುಂದಾಪುರಕ್ಕೆ ಬಂದಿಳಿದ ʼಕಲ್ಕಿʼ ಚಿತ್ರದ ಭೈರವನ ವಾಹನಕ್ಕೆ ಅದ್ಧೂರಿ ಸ್ವಾಗತ

Views: 462
ಕುಂದಾಪುರ : ‘ಕಲ್ಕಿ’ 2898 ಎಡಿʼ ಸಿನಿಮಾದ ಪ್ರಚಾರದ ಭಾಗವಾಗಿ ಬುಜ್ಜಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೆಲ್ಲ ಸುತ್ತಿ ಇದೀಗ ಕರ್ನಾಟಕ್ಕೆ ಆಗಮಿಸಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಲು ಕುಂದಾಪುರಕ್ಕೆ ಬಂದಿಳಿದ ಬುಜ್ಜಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಚಿತ್ರದ ಪ್ರಮುಖ ಪಾತ್ರವಾಗಿರುವ ಬುಜ್ಜಿ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಬುಜ್ಜಿ ಎಂದರೆ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಪ್ರಭಾಸ್ ಅವರ ಕಾರು. ಚಿತ್ರಕ್ಕಾಗಿಯೇ ಇದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ʼಕಾಂತಾರʼ ಚಿತ್ರದ ಮೂಲಕ ದೇಶದ ಗಮನ ಸೆಳೆದ ರಿಷಬ್ ಶೆಟ್ಟಿ ಅವರು ಸದ್ಯ ʼಕಾಂತಾರ ಚಾಪ್ಟರ್ 1ʼ ಸಿನಿಮಾದ ಶೂಟಿಂಗ್ಗಾಗಿ ತಮ್ಮ ಊರಾದ ಕುಂದಾಪುರದಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ಭೇಟಿಯಾಗಲು ʼಕಲ್ಕಿʼ ಬುಜ್ಜಿ ಕುಂದಾಪುರಕ್ಕೆ ಆಗಮಿಸಿದೆ. ರಿಷಬ್ ಶೆಟ್ಟಿ ಬುಜ್ಜಿಯನ್ನು ಓಡಿಸಿ ಸಂಭ್ರಮಿಸಿದ್ದಾರೆ.

ರಿಷಬ್ ಶೆಟ್ಟಿ ಬುಜ್ಜಿಯನ್ನು ಓಡಿಸುತ್ತಿರುವ ವಿಡಿಯೊವನ್ನು ಚಿತ್ರ ತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಈಗಾಗಲೇ ಅಕ್ಕಿನೇನಿ ನಾಗಚೈತನ್ಯ, ಮಾಜಿ ಫಾರ್ಮುಲಾ ಒನ್ ರೇಸರ್ ನಾರಾಯಣ್ ಕಾರ್ತಿಕೇಯನ್, ಆನಂದ್ ಮಹೀಂದ್ರ ಸೇರಿದಂತೆ ಹಲವರ ಬುಜ್ಜಿಯಲ್ಲಿ ಒಂದು ರೌಂಡ್ ಹೊಡೆದಿದ್ದು, ಇದೀಗ ಈ ಅವಕಾಶ ರಿಷಬ್ ಶೆಟ್ಟಿ ಅವರಿಗೂ ಲಭಿಸಿದೆ. ಈ ಬಗ್ಗೆ ಅವರು ಸಂತಸ ಹಂಚಿಕೊಂಡಿದ್ದಾರೆ. “ಟೀಸರ್ನಲ್ಲೇ ಗೊತ್ತಾಗುತ್ತೆ. ಯಾವ ರೇಂಜ್ನಲ್ಲಿ ಬುಜ್ಜಿ ಹವಾ ಇದೆ ಅನ್ನೋದು. ಡ್ರೈವ್ ಮಾಡಿದ್ದು ಒಂದು ಅದ್ಭುತ ಅನುಭವ. ಆಲ್ ದಿ ಬೆಸ್ಟ್ ಭೈರವ ಮತ್ತು ಬುಜ್ಜಿ. ಕಲ್ಕಿ ಜೂನ್ 27ಕ್ಕೆ ರಿಲೀಸ್ ಆಗುತ್ತಿದೆ. ಎಲ್ಲರೂ ಥಿಯೇಟರ್ಗೆ ಬಂದು ಸಿನಿಮಾ ನೋಡಿ” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.






