ಪ್ರವಾಸೋದ್ಯಮ

ಇಬ್ಬರು ಆಫ್ರಿಕನ್‌ ಮಹಿಳೆಯರ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ 19.15 ಕೋಟಿ ಮೌಲ್ಯದ ಚಿನ್ನ ವಶಕ್ಕೆ 

Views: 157

ಇಬ್ಬರು ವಿದೇಶಿ ಮಹಿಳೆಯರು ಒಳ ಉಡುಪು ಮತ್ತು ಲಗೇಜ್‌ಗಳಲ್ಲಿ ಬಚ್ಚಿಟ್ಟಿದ್ದ 33 ಕೆಜಿ ಚಿನ್ನವನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮುಂಬೈ ಏರ್‌ಪೋರ್ಟ್‌ ಕಸ್ಟಮ್ಸ್‌‍ ಅಧಿಕಾರಿಗಳು ಇಬ್ಬರು ವಿದೇಶಿ ಮಹಿಳೆಯರಿಂದ 19.15 ಕೋಟಿ ಮೌಲ್ಯದ 32.79 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ವಿದೇಶಿ ಮಹಿಳೆಯರ  ಒಳ ಉಡುಪು ಮತ್ತು ಲಗೇಜುಗಳಲ್ಲಿ ಬಚ್ಚಿಟ್ಟಿದ್ದ 19.15 ಕೋಟಿ ಮೌಲ್ಯದ 32.79 ಕೆಜಿ ಚಿನ್ನವನ್ನು ಕಸ್ಟಮ್ಸ್‌‍ ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆಫ್ರಿಕನ್‌ ದೇಶಗಳ ಇಬ್ಬರು ಪ್ರಯಾಣಿಕರನ್ನು ಅನುಮಾನದ ಮೇಲೆ ಶೋಧ ನಡೆಸಿದಾಗ 33 ಕೆಜಿ ಚಿನ್ನ ಪತ್ತೆಯಾಗಿದೆ.ಎರಡೂ ಪ್ರಕರಣಗಳಲ್ಲಿ ಚಿನ್ನವನ್ನು ಒಳ ಉಡುಪು ಮತ್ತು  ಲಗ್ಗೇಜುಗಳಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದ್ದು, ಮಹಿಳೆಯರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Related Articles

Back to top button