ಇತರೆ

ಕುಂದಾಪುರ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Views: 350

ಕುಂದಾಪುರ: ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣ ಇನ್ನಿತರ ವಂಚನೆಗೆ ಸಂಬಂಧಿಸಿದಂತೆ ಕೋಟ ಮತ್ತು ಕುಂದಾಪುರದ ಹಲವು  ಪ್ರಕರಣದಲ್ಲಿ ಬಾಗಿಯಾಗಿದ್ದ ಆರೋಪಿ ದಿನೇಶ್‌ ಮೊಗವೀರನನ್ನು ಬಿದ್ಕಲ್‌ ಕಟ್ಟೆ ಬಸ್‌ ನಿಲ್ದಾಣ ಸಮೀಪ ಬಂಧಿಸಿದ್ದಾರೆ. ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈತನಿಗೆ ಐದು ಮದುವೆಯಾಗಿದ್ದು ವಂಚನೆ, ಪೋಕ್ಸೋ, ಕಳ್ಳತನ ಸೇರಿ ಹಲವು ಪ್ರಕರಣ ದಾಖಲಾಗಿತ್ತು.

ಕೋಟ ಠಾಣಾಧಿಕಾರಿ ತೇಜಸ್ವಿ ಮಾರ್ಗದರ್ಶನದಲ್ಲಿ ಸಿಬಂದಿಗಳಾದ ಹೆಡ್‌ ಕಾನ್‌ಸ್ಟೆಬಲ್‌ ಕೃಷ್ಣ , ರಾಜೇಶ್‌, ಮಂಜುನಾಥ್‌ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

 

Related Articles

Back to top button
error: Content is protected !!