ಆರೋಗ್ಯ

ಗರ್ಭಿಣಿ ಮಹಿಳೆ ದಾರುಣ ಸಾವು.. ವೈದ್ಯರ ನಿರ್ಲಕ್ಷ್ಯ ಆರೋಪ

Views: 97

ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಗರ್ಭಿಣಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಬಿ.ಹೊಸಳ್ಳಿ ಗ್ರಾಮದ ಪ್ರತಿಭಾ ಮಹಾಂತೇಶ್ (24) ಮೃತ ತುಂಬು ಗರ್ಭಿಣಿ.

ಗಜೇಂದ್ರ ಗಡದ ಸೂಡಿ ಗ್ರಾಮದ ಮಹಾಂತೇಶ್ ಎಂಬಾತನ ಜೊತೆ ಪ್ರತಿಭಾ ಮದುವೆ ಆಗಿದ್ದರು. ಮೃತ ಗರ್ಭಿಣಿ ಪ್ರತಿಭಾಗೆ ಮೂರು ವರ್ಷದ ಮಗು ಇದೆ. ಪ್ರತಿಭಾ ಎರಡನೇ ಹರಿಗೆಗೆಂದು ಕೊಪ್ಪಳ ಎಂದರೆ ತವರು ಮನೆಗೆ ಬಂದಿದ್ದರು. ಹೀಗಾಗಿ ಪ್ರತಿಭಾ ಪೋಷಕರು ನಗರದ ಖಾಸಗಿ ಗೋವಿನಕೊಪ್ಪ ಆಸ್ಪತ್ರೆಯಲ್ಲಿ ನಿನ್ನೆ ಹೆರಿಗೆಗಾಗಿ ದಾಖಲು ಮಾಡಿದ್ದರು.

ಆದರೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಗೆ ರಕ್ತಸ್ರಾವ ಆಗಿತ್ತಂತೆ. ಏಕಾಏಕಿ ಗರ್ಭಿಣಿ ಪ್ರತಿಭಾಗೆ ಬಿಪಿ ಕಡಿಮೆ ಆಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದರಂತೆ. ಇಷ್ಟಾದರೂ ವೈದ್ಯ ಗೋವಿನಕೊಪ್ಪ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಅಂತ ಹೇಳಿದ್ದರಂತೆ. ವೈದ್ಯರು ಹೇಳಿದ ಕೂಡಲೇ ಗರ್ಭಿಣಿ ಪ್ರತಿಭಾರನ್ನು ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಪ್ರತಿಭಾ ಮೃತಪಟ್ಟಿದ್ದಾರೆ. ಸರಿಯಾಗಿ ಓ ನೆಗೆಟಿವ್ ರಕ್ತ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಗರ್ಭಿಣಿ ಮೃತಪಟ್ಟಿದ್ದಾಳೆ ಅಂತ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆ ವೈದ್ಯರ  ವಿರುದ್ಧ ಕೇಸ್ ದಾಖಲಿಸಿ ಕ್ರಮಕೈಗೊಳ್ಳಿ. ನಮಗೆ ನ್ಯಾಯಕೊಡಿ ಎಂದು ಪೊಲೀಸರಿಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!