ಸಾಂಸ್ಕೃತಿಕ

“ಕಾಂಬ” ಸಮ್ಮೇಳನಾಧ್ಯಕ್ಷರಾಗಿ ಎ.ಎಸ್.ಎನ್. ಹೆಬ್ಬಾರ್

Views: 71

ಉಡುಪಿ: ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್, ಕೋಟತಟ್ಟು ಗ್ರಾಮ ಪಂಚಾಯಿತಿ, ಉಸಿರು ಕೋಟ, ಬ್ರಹ್ಮಾವರ ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘ, ಕುಂದಾಪುರ ಕನ್ನಡ ಪರಿಷತ್ ಆಶ್ರಯದಲ್ಲಿ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಮೇ.5 ರಂದು ನಡೆಯುವ ನಾಲ್ಕನೇ ಕುಂದಾಪುರ ಕನ್ನಡ ಸಾಹಿತ್ಯ ಸಮ್ಮೇಳನ “ಕಾಂಬ”- 24 ರ ಸಮ್ಮೇಳನಾಧ್ಯಕ್ಷರಾಗಿ ಕುಂದಾಪುರ ಕನ್ನಡ ಹರಿಕಾರ ಎ.ಎಸ್.ಎನ್ ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಹೊಸ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನ ರಚಿಸಿ ಕುಂದಾಪುರ ಕನ್ನಡಕ್ಕೆ ಮೂಲ ದೆಸೆ ನೀಡಿದಂತಹವರು ಎ.ಎಸ್. ಎನ್.ಹೆಬ್ಬಾರರು ಎಂದು ಕಾರಂತ  ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ.ಸಿ.ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಚಾಲಕ ಸತೀಶ್ ವಡ್ಡರ್ಸೆ ತಿಳಿಸಿದ್ದಾರೆ.

Related Articles

Back to top button
error: Content is protected !!