ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಾಲಕ ಸಾವು :ಕೊನೆ ಕ್ಷಣದ ಜೀವನ್ಮರಣ ಹೋರಾಟ ಸಿಸಿಟಿವಿಯಲ್ಲಿ ಸೆರೆ

Views: 212
ಕುಂದಾಪುರ :ಎನ್ವೆಂಚರ್ಸ್ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಲಕನೊರ್ವ ಮುಳುಗಿ ಮೃತಪಟ್ಟಿದ್ದಾನೆ. ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್‌ನಲ್ ಘಟನೆ ನಡೆದಿದೆ. ಹೊಡೆ ಮುಹಮ್ಮದ್ ಅರೀಝ್ (10) ಮೃತ ದುರ್ದೈವಿ.
ಪೋಷಕರ ಜತೆಗೆ ರೆಸಾರ್ಟ್‌ಗೆ ತೆರಳಿದ್ದ ಬಾಲಕನೊರ್ವ ಸ್ವಿಮ್ಮಿಂಗ್ ಪೂಲ್‌ಗೆ ಇಳಿದಿದ್ದು, ಮೇಲೆ ಬರಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣಕ್ಕೆ ಮುಹಮ್ಮದ್ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ.
ರೆಸಾರ್ಟ್ ಸ್ವಿಮ್ಮಿಂಗ್ ಪೂಲ್ ನೀರಿಗೆ ಇಳಿದ ಮುಹಮ್ಮದ್ ಹೊರಬರಲು ಆಗದೆ ತೀವ್ರ ಅಸ್ವಸ್ಥಗೊಂಡಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಮುಹಮ್ಮದ್‌ನನ್ನು ಕೂಡಲೇ ಮೇಲೆತ್ತಿ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಹಮ್ಮದ್ ಕೊನೆಯುಸಿರೆಳೆದಿದ್ದಾನೆ. ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
ಮುಹಮ್ಮದ್ ಪೂಲ್ ಬಳಿ ಬಂದವನೇ ಆಳ ತಿಳಿಯದೆ ನೀರಿಗೆ ಇಳಿದಿದ್ದ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದ್ದಾನೆ. ಸುಮಾರು ಎರಡು ನಿಮಿಷಗಳ ಜೀವನ್ಮರಣ ಹೋರಾಡಿದ್ದಾನೆ. ಆದರೆ ವಿಧಿಯಾಟ ಅಂದರೆ ಸುತ್ತಮುತ್ತ ಮೂವತ್ತು ಹೆಚ್ಚು ಜನರು ಇದ್ದರೂ ಯಾರು ಇದನ್ನೂ ಗಮನಿಸಿಲ್ಲ. ಮುಹಮ್ಮದ್‌ನ ಕೊನೆ ಕ್ಷಣದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.