ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ನಿಂದ ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಮಗುಚಿ ಬಿದ್ದು ಮಹಿಳೆ ಸಾವು, ಇಬ್ಬರು ಗಂಭೀರ

Views: 1029
ಕುಂದಾಪುರ :ಇಂದು ಅಪರಾಹ್ನದ ಹೊತ್ತಿಗೆ ಫ್ಲೈ ಓವರ್ ನಿಂದ ಚಲಿಸುತ್ತಿರುವ ಇನ್ನೋವಾ ಕಾರೊಂದು ಏಕಾಏಕಿ ನಿಯಂತ್ರಣ ತಪ್ಪಿ ಕಬ್ಬಿಣದ ಸರಳುಗಳಿಗೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆಗೆ ತಲೆಕೆಳಗಾಗಿ ಬಿದ್ದ ಪರಿಣಾಮ ಮಹಿಳೆ ಸಾವಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತಪಟ್ಟ ಮಹಿಳೆ ಸಮೀರಾ( 45 )ಮೋನವರ್ ಟಿಪಿ( 49) ಪುತ್ರ ಸುಹೇಲ್ (19) ಗಂಭೀರ ಗಾಯ ಗೊಂಡವರು ಎಂದು ತಿಳಿಯಲಾಗಿದೆ.
ಕುಂದಾಪುರ ಬೊಬ್ಬರ್ಯನಕಟ್ಟೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹಬ್ಬಕ್ಕೆಂದು ಮುಂಬೈನಿಂದ ಊರಿಗೆ ಹೊರಟವರು
ಮುಂಬೈನಲ್ಲಿದ್ದ ಕುಟುಂಬವೊಂದು ಕೇರಳದ ಮಾಹೆಗೆ ಹೊರಟಿದ್ದಾರೆ. ಆ ಕುಟುಂಬ ಕುಂದಾಪುರ ತಲುಪುತ್ತಿದ್ದಂತೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ತಂದೆ ತಾಯಿ ಹಾಗೂ ಮಗ ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ತಾಯಿ ಇಹಲೋಕ ತ್ಯಜಿಸಿದ್ದಾರೆ. ತಂದೆ ಹಾಗೂ ಮಗ ಇಬ್ಬರನ್ನೂ ಮಣಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.