ಜನಮನ

ಉಡುಪಿ ಸ್ವತಃ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನದ ಜಾಗೃತಿ 

Views: 89

ಉಡುಪಿ:ಕರಾವಳಿಯ ಪ್ರಸಿದ್ಧ. ಜಾನಪದ  ಯಕ್ಷಗಾನ ಕಲೆ ಮೂಲಕ ಸ್ವತಃ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸಿರುವುದು ಗಮನ ಸೆಳೆದಿದೆ. ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಮಹತ್ವವನ್ನು ಸಾರಿದ್ದಾರೆ

ಏಪ್ರಿಲ್ 26 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತು ಮೇ 7 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ(ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ) ಮತದಾನ ಪ್ರಮಾಣ ಹೆಚ್ಚಿಸಲು ಉಡುಪಿ ಜಿಲ್ಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ.

ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಯಲ್ ನೇತೃತ್ವದ ಉಡುಪಿ ಜಿಲ್ಲಾ (ಸ್ವೀಪ್) ಸಮಿತಿಯು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶಿಷ್ಟ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಪ್ರತೀಕ್ ಬಯಲ್, ಕುಂದಾಪುರ ಎಸಿ ರಶ್ಮಿ, ಉಡುಪಿ ಎಡಿಸಿ ಮಮತಾದೇವಿ ಜಿ ಎಸ್ ಮತ್ತು ಕರಾವಳಿ ಭದ್ರತಾ ಪೊಲೀಸ್  ವರಿಷ್ಠಾಧಿಕಾರಿ ಮಿಥುನ್ ಎಚ್ ಎನ್ ಅವರು ಯಕ್ಷಗಾನ ಕಲಾವಿದರ ವೇಷಭೂಷಣವನ್ನು ಧರಿಸಿ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶೇ.100 ಮತದಾನಕ್ಕೆ‌, ಮತದಾನದ ಮಹತ್ವವನ್ನು ಸಾರಿ ಎಲ್ಲರೂ‌ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಕರೆ ನೀಡಿದರು.

ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳು ಸುಮಾರು ಐದು ಗಂಟೆಗಳ ಕಾಲ ಯಕ್ಷಗಾನ ವೇಷಭೂಷಣವನ್ನು ಧರಿಸಿ ಖುಷಿ ಪಟ್ಟರು. ಏಕೆಂದರೆ ಈ ಎಲ್ಲಾ ಅಧಿಕಾರಿಗಳು ಮೊದಲ ಬಾರಿಗೆ ಯಕ್ಷಗಾನ ವೇಷಭೂಷಣವನ್ನು ಧರಿಸಿದ್ದರು.

Related Articles

Back to top button
error: Content is protected !!