ಕರಾವಳಿ

ತಲ್ಲೂರು ಸ್ಕೂಟರ್‌ ಮತ್ತು ಮಿನಿ ಬಸ್‌ ಡಿಕ್ಕಿ: ಗಂಭೀರ ಗಾಯಗೊಂಡ ವ್ಯಕ್ತಿ ಸಾವು

Views: 130

ಕುಂದಾಪುರ: ಮಾರ್ಚ್ 31 ರಂದು ತಲ್ಲೂರು ಗರಡಿ ಸಮೀಪ  ಸ್ಕೂಟರ್‌ ಮತ್ತು ಮಿನಿ ಬಸ್‌ ನಡುವೆ ಕಳೆದ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಇಲ್ಲಿನ ನಿವಾಸಿ ಚಂದ್ರಶೇಖರ್‌ ಪೂಜಾರಿ (52) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಕೇಬಲ್‌ ಆಪರೇಟರ್‌ಆಗಿ ಕೆಲಸ ಮಾಡುತ್ತಿದ್ದರು. ಕಳೆದ ರವಿವಾರ ಅಪರಾಹ್ನ ತಲ್ಲೂರು ಸರ್ಕಲ್‌ ಬಳಿ ಶೇಖರ್‌ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಮಿನಿ ಬಸ್‌ ಢಿಕ್ಕಿಯಾಗಿತ್ತು

 

Related Articles

Back to top button