ಕರಾವಳಿ
ಕೊಲ್ಲೂರು ಕೊಡಚಾದ್ರಿ ಬೆಟ್ಟಕ್ಕೆ ಹೋಗುತ್ತಿದ್ದ ಜೀಪ್ ಮಗುಚಿ ಯಾತ್ರಾರ್ಥಿ ಮಹಿಳೆ ಸಾವು

Views: 107
ಕೊಲ್ಲೂರು: ಕೇರಳದ ಕಣ್ಣೂರಿನಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ ಯಾತ್ರಾರ್ಥಿಗಳು ಕೊಡಚಾದ್ರಿ ಬೆಟ್ಟಕ್ಕೆ ಹೋಗುತ್ತಿದ್ದ ವೇಳೆ ಜೀಪೊಂದು ಮಗುಚಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಕೊಲ್ಲೂರು ದೇವಳಕ್ಕೆ ದರ್ಶನಕ್ಕೆ ಬಂದ ಕೇರಳದ ಯಾತ್ರಾರ್ಥಿಗಳು ಕೊಡಚಾದ್ರಿ ಬೆಟ್ಟಕ್ಕೆಂದು ಜೀಪ್ ಮೂಲಕ ಹೊರಟಿದ್ದರು. ಕಟ್ಟಿನ ಹೊಳೆ ಬಳಿ ಆಕಸ್ಮಿಕವಾಗಿ ಮಗುಚಿ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ 6 ಮಂದಿ ಗಂಭೀರ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಕಣ್ಣೂರಿನ ಶಾರದಾ (75) ಎಂದು ತಿಳಿಯಲಾಗಿದೆ. ಗಂಭೀರ ಗಾಯಗೊಂಡ ಪದ್ಮನಾಭನ್ (53), ಅದುಯಾ (17) ಸುಲೋಚನ (55) ಪ್ರಸನ್ನ (40) ಪ್ರೀತ ಹಾಗೂ ದಾಮೋದರ ಎಂದು ಗುರುತಿಸಲಾಗಿದೆ.