ಕರಾವಳಿ
ಬ್ರಹ್ಮಾವರ ಕುತ್ತಿಗೆಗೆ ಹಗ್ಗ ಬಿಗಿದು ಸಾವು

Views: 99
ಬ್ರಹ್ಮಾವರ: ಚೇರ್ಕಾಡಿ ನಿವಾಸಿ ಸದಾಶಿವ (62) ಮನೆಯಲ್ಲಿ ಗಲಾಟೆ ಮಾಡಿಕೊಂಡು ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ಘಟನೆ ನಡೆದಿದೆ.
ಅವರು ಮನೆಯಲ್ಲಿ ಕೌಟುಂಬಿಕ ವಿಚಾರವಾಗಿ ಗಲಾಟೆ ಮಾಡಿಕೊಂಡು ಮನೆಯಿಂದ ತೆರಳಿದ್ದರು. ಮನೆಯವರು ಹುಡುಕಾಡಿದಾಗ ಸಮೀಪದ ಹಾಡಿಯಲ್ಲಿ ಕುತ್ತಿಗೆಗೆ ಹಗ್ಗವನ್ನು ಬಿಗಿದ ಸ್ಥಿತಿಯಲ್ಲಿ ಕುಳಿತಿದ್ದರು. ಕೂಡಲೇ ಅವರನ್ನು ಹಗ್ಗ ಬಿಡಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ದಾರಿಮುದ್ದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.