ಪುನರ್ಜನ್ಮ ಕಂಡ ಸಾತ್ವಿಕ್ನನ್ನು ಕಂಡು ಊರಿಗೇ ಉರೇ ಜಯಘೋಷ ..ಸಾವನ್ನು ಗೆದ್ದು ಬಂದ ಮಗುವಿಗೆ “ಸಿದ್ದಲಿಂಗ” ಹೆಸರು ಹೆತ್ತವರ ನಿರ್ಧಾರ

Views: 100
ವಿಜಯಪುರ :ಬರೋಬ್ಬರಿ 265 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದ. ಬುಧವಾರ ಸಂಜೆ 5 ಗಂಟೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಂಚ್ಯಾಣ್ ಗ್ರಾಮದ ಸತೀಶ್ ಮತ್ತು ಪೂಜಾ ದಂಪತಿಯ ಮಗು ಕೊಳವೆ ಬಾವಿಗೆ ಬಿದ್ದು ಜೀವನ್ಮರಣದ ಹೋರಾಟ ನಡೆಸಿತ್ತು. 20 ಗಂಟೆಗಳ ಕಾಲ ನಡೆದ ರಣ ರೋಚಕ ಕಾರ್ಯ ಕೊನೆಗೂ ಸಕ್ಸಸ್ ಕಂಡಿದ್ದು, ಪುಟ್ಟ ಮಗು ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ.
ದೇಶದಲ್ಲಿ ಅದೆಷ್ಟು ಕೊಳವೆ ಬಾವಿ ಪ್ರಕರಣಗಳು ನಡೆದಿವೆ. ಆದ್ರೆ ಬಾವಿಗೆ ಬಿದ್ದ ಕಂದಮ್ಮಗಳು ಬದುಕಿ ಬಂದ ಪ್ರಕರಣಗಳು ತುಂಬಾ ಕಮ್ಮಿ. ಅಚ್ಚರಿಯೋ ಪವಾಡವೋ ಅಥವಾ ಕೋಟ್ಯಾಂತರ ಹೃದಯಗಳ ಪ್ರಾರ್ಥನೆಯೂ ಸಾತ್ವಿಕ್ ಪ್ರಕರಣದಲ್ಲಿ ಪವಾಡವೇ ನಡೆದು ಹೋಗಿದೆ. 265 ಅಡಿ ಆಳದ ಬಾವಿಗೆ ಬಿದ್ದಿದ್ದ ಪುಟ್ಟ ಕಂದ 16 ಅಡಿಯಲ್ಲಿ ಸಿಲುಕಿ ಸಾವು ಬದುಕಿನ ಹೋರಾಟ ನಡೆಸ್ತಿದ್ದ ಕಂದಮ್ಮಗೆ ಮರು ಜೀವ ಸಿಕ್ಕಿದೆ. ಸಾತ್ವಿಕ್ ಪುನರ್ಜನ್ಮಕ್ಕೆ ಇಡೀ ಕರುನಾಡೇ ಸಂತಸಗೊಂಡಿದೆ.
ಪುನರ್ಜನ್ಮ ಕಂಡ ಸಾತ್ವಿಕ್ನನ್ನು ಕಂಡು ಊರಿಗೇ ಉರೇ ಸಂತೋಷದಿಂದ ಜಯಘೋಷಗಳನ್ನು ಕೂಗಿ ಖುಷಿ ಪಟ್ಟಿದೆ.
ಅಗ್ನಿಶಾಮಕ, ಮೂರು ತಂಡ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ರು. ಕೊಳವೆ ಬಾವಿ ಪಕ್ಕ 20 ಅಡಿ ಬಾವಿ ಕೊರೆದಿದ್ರು. ಆದ್ರೆ ಅಡ್ಡಲಾಗಿ ಬಾವಿ ಕೊರೆಯುವ ವೇಳೆ ಕಲ್ಲು ಬಂಡೆ ಅಡಲ್ಲಾಗಿ ಮತ್ತೆ ರಕ್ಷಣಾ ಕಾರ್ಯದಲ್ಲಿ ವಿಳಂಬಾಗಿತ್ತು. ಹೀಗಾಗಿ ಮತ್ತೆ ಆತಂಕ ಎದುರಾಗಿತ್ತು. ಕೊನೆಗೆ ಬ್ರೇಕರ್ ಮೂಲಕ ನಿಧಾನಗತಿಯಿಂದಲೇ ಬಂಡೆಯನ್ನ ಒಡೆದು ಕೊಳವೆ ಬಾವಿಯಲ್ಲಿ ಸಿಲುಕಿದ್ದ ಕಂದನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ
ಮಗನ ಪುನರ್ಜನ್ಮ ಕಂಡು ಸಾತ್ವಿಕ್ ತಂದೆ ಸತೀಶ್ ಮಗುವಿನ ರಕ್ಷಣಗೆ ಶ್ರಮ ಪಟ್ಟ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ರು. ನನ್ನ ಮಗ ಬದುಕಿ ಬಂದಿದ್ದು, ಹಾಲು ಕುಡಿದಷ್ಟೆ ಖುಷಿಯಾಗಿದೆ ಎಂದ್ರು. ಮರಣವನ್ನೆ ಗೆದ್ದು ಬಂದ ಮಗನನ್ನು ಕಂಡು ಸತೀಶ್ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ಹೆತ್ತ ಕಂದಮ್ಮನ ಉಸಿರಿಗೆ ಜೀವ ಬಂತು ಅಂತ ಇಡೀ ಕುಟುಂಬ ಒಂದು ಕ್ಷಣ ನಿಟ್ಟುಸಿರು ಬಿಟ್ಟಿತ್ತು
ಇದೇ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜ ಪವಾಡದ ಬಗ್ಗೆಯೂ ಚರ್ಚೆ ನಡೆದಿದೆ. ಮಗು ಕೊಳವೆ ಬಾವಿಗೆ ಬಿದ್ದಾಗ ಸಾತ್ವಿಕ್ ತಾಯಿ ಲಚ್ಯಾಣದ ಮಹಾರಾಜರಿಗೆ ಹರಕೆ ಕಟ್ಕೊಂಡಿರ್ತಾರೆ. ಹೀಗಾಗಿ ರಕ್ಷಣ ಸಿಬ್ಬಂದಿಯ ಶ್ರಮದ ಜೊತೆಗೆ ಸಿದ್ದಲಿಂಗ ಮಹಾರಾಜರ ಆಶಿರ್ವಾದವೂ ಸಾತ್ವಿಕ್ಗೆ ಸಿಕ್ಕಿದ್ದು, ಕಂದಮ್ಮನಿಗೆ ಪುನರ್ಜನ್ಮ ಸಿಕ್ಕಿದೆ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ.
ಇನ್ನು, ಈ ಸಿದ್ದಲಿಂಗ ಮಹಾರಾಜರ ಬಗ್ಗೆ ಹೇಳೋದಾದ್ರೆ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ಹಾಗೂ ನಾಗಮ್ಮ ಎಂಬ ಶರಣ ದಂಪತಿಗಳ ಮಗನಾಗಿ ಜನಿಸಿದ್ರು.
ಬಾಲ್ಯದಿಂದಲೇ ಹತ್ತು ಹಲವು ಲೀಲೆಗಳ ಮೂಲಕ, ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದ ಸಿದ್ದಲಿಂಗ ಮಹಾರಾಜರು ಇದೇ ಲಚ್ಯಾಣದಲ್ಲಿ ಅಗ್ನಿ ಪ್ರವೇಶ ಮಾಡಿದರು ಅನ್ನೋ ನಂಬಿಕೆ. ಈ ಹಿಂದೆ ರುದ್ರಭೂಮಿಯಾಗಿದ್ದ ಲಚ್ಯಾಣದಲ್ಲಿನ ಕಮರಿಮಠದ ಸ್ಥಳವು ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಕಾಲಾಂತರ ಪುಣ್ಯ ಕ್ಷೇತ್ರವಾಗಿತ್ತಂತೆ. ಇದೇ ಸಿದ್ದಲಿಂಗ ಮಹರಾಜರ ಆಶಿರ್ವಾದ ನಮ್ಮ ಮಗನಿಗೆ ಲಭಿಸಿದೆ ಅನ್ನೋದು ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್ ಪೋಷಕರ ನಂಬಿಕೆ. ಹೀಗಾಗಿ ಇನ್ಮುಂದೆ ಸಾತ್ವಿಕ್ನನ್ನು ಸಿದ್ದಲಿಂಗ ಅಂತಲೇ ಕರೆಯೋದಾಗಿ ಸಾತ್ವಿಕ್ ಕುಟುಂಬ ಹೇಳಿದೆ. ಇನ್ನು ಪುಟ್ಟ ಕಂದ ಸಾತ್ವಿಕ್ ಬದುಕಿ ಬಂದಿಕ್ಕಾಗಿ ಇಡೀ ಗ್ರಾಮಸ್ಥರೆಲ್ಲ ಸಿದ್ದಲಿಂಗ ಮಹರಾಜರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸಿದ್ದಲಿಂಗ ಅಜ್ಜನವರ ಕೃಪೆಯಿಂದ ಕಂದನಿಗೆ ಮತ್ತೆ ಬದುಕಿನ ಭರವಸೆ ಸಿಕ್ಕಿದೆ ಅಂತ ಸಿದ್ದಲಿಂಗ ಮಹಾರಾಜರಿಗೆ ಜಯಘೋಷ ಹಾಕಿದ್ರು. ಸಿದ್ದಲಿಂಗ ಮಹಾರಾಜರಿಗೆ ದೀರ್ಘದಂಡ ನಮಸ್ಕಾರ ಹಾಕಿ ಸಾತ್ವಿಕ್ ಆಯುಷ್ಯ ಇನ್ನು ಹೆಚ್ಚಾಗಲಿ ಅಂತ ಗ್ರಾಮಸ್ಥರೆಲ್ಲ ಹಾರೈಸಿದ್ರು.






