ಕರಾವಳಿ

ನಿಧಿ ಆಸೆಗೆ ತುಮಕೂರಿಗೆ ತೆರಳಿ ಕೊಲೆಯಾದ  ಮೂವರ ಮೃತದೇಹ ಇಂದು ಬೆಳ್ತಂಗಡಿಯಲ್ಲಿ ಅಂತ್ಯಸಂಸ್ಕಾರ 

Views: 146

ಬೆಳ್ತಂಗಡಿ: ತುಮಕೂರಿನಲ್ಲಿ ನಿಧಿ ಅಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ದೇಹವು ಇಂದು ಮಾ.29 ರಂದು ಮುಂಜಾನೆ ಬೆಳ್ತಂಗಡಿ ಮನೆಗೆ ತಲುಪಿದೆ.

ದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಇದೀಗ ಮೂವರ ಮೃತದೇಹವನ್ನು ಮನೆಮಂದಿಗೆ 7 ದಿನದ ಬಳಿಕ ಮಾ.29 ರಂದು ಶುಕ್ರವಾರ ಬೆಳಗ್ಗೆ ಉಜಿರೆಗೆ ತಲುಪಿದೆ.

ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ಹಾಗೂ ಸಿದ್ದೀಕ್ ಅವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದೆ. ಅಲ್ಲಿ ಅಂತಿಮ ದರ್ಶನ ಹಾಗೂ ವಿದಿವಿಧಾನ ನೆರವೇರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.

Related Articles

Back to top button