ಕರಾವಳಿ

BREKING NEWS:ಕುಂದಾಪುರ ಅಪಾರ್ಟ್ಮೆಂಟ್ ಐದನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು

Views: 523

ಕುಂದಾಪುರ: ಇಲ್ಲಿನ ಪ್ಲಾಟ್ ಒಂದರಲ್ಲಿ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ  ನಗರದ ಮುಖ್ಯ ರಸ್ತೆಯ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ.

ಮೃತರನ್ನು ಲಕ್ಷ್ಮೀ ಪ್ರತಾಪ್ ಅವರ ಪತ್ನಿ ಲಕ್ಷ್ಮೀ ಪ್ರತಾಪ್ ನಾಯಕ್( 41) ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ  7 ಗಂಟೆಯ ಸುಮಾರಿಗೆ ಪ್ಲಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನ ಕಾಯಿ ತರಲು ಹೋಗಿದ್ದ ಲಕ್ಷ್ಮಿ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಫ್ಲೋರಿಗೆ ಅವರು ಬಿದ್ದಿದ್ದಾರೆ ಇದರಿಂದ ತೀವ್ರ ತಲೆಗೆ ಪೆಟ್ಟಾಗಿದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರ ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪ್ರಕರಣ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button