ಕರಾವಳಿ

ಯಲ್ಲಾಪುರದ ಯುವತಿ ಹುಬ್ಬಳ್ಳಿ ಕಂಪೆನಿಯಿಂದ ನಾಪತ್ತೆ..! 

Views: 207

ಕಾರವಾರ :ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ನಿವಾಸಿ ತೇಜಾ (26 ) ಎಂಬ ಯುವತಿ ದೇಸಾಯಿ ಮನೆ ಎಂಬ ಮಜಿರೆಯಿಂದ ತಾನು ಕೆಲಸ ಮಾಡುತ್ತಿದ್ದ ಹುಬ್ಬಳ್ಳಿ ಕಂಪನಿಗೆ ಹೋಗುವುದಾಗಿ ಹೇಳಿ ಹೋದಾಕೆ ಈತನಕ ಮನೆಗೆ ಬಂದಿಲ್ಲ.

ಯಲ್ಲಾಪುರ ಬಸ್ ನಿಲ್ದಾಣದಿಂದ ಹೋದವಳು, ಕೆಲಸ ಮಾಡುತ್ತಿದ್ದ ಸ್ಥಳಕ್ಕೂ ಹೋಗದೇ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಮಹಿಳೆಯ ಚಹರೆ: ದುಂಡನೆಯ ಮುಖ, ಕಪ್ಪು ಕೂದಲು, ಗೋಧಿ ಮೈ ಬಣ್ಣ, 5.2 ಅಡಿ ಎತ್ತರ ಇದ್ದಾಳೆ. ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಹಳದಿ ಬಣ್ಣದ ಚೂಡಿದಾರ ಧರಿಸಿದ್ದಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08419-261133, ಯಲ್ಲಾಪುರ ಪೊಲೀಸ್ ನಿರೀಕ್ಷಕರ ದೂ. ಸಂ: 9480805757 ಹಾಗೂ ಪಿ.ಎಸ್.ಐ ದೂ.ಸಂ: 9480805273 ನ್ನು ಸಂಪರ್ಕಿಸುವಂತೆ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button