ಕರಾವಳಿ
ಏಕ ಪವಿತ್ರ ನಾಗ ಮಂಡಲೋತ್ಸವ
Views: 380
ಕುಂದಾಪುರ ತಾಲೂಕಿನ ಆನೆಗುಡ್ಡೆ ಸಮೀಪ ಬೀಜಾಡಿಯಲ್ಲಿ ಮಾ. 13 ರಂದು ಸಕಲ ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಕಾಯ೯ಕ್ರಮಗಳೊಂದಿಗೆ ಏಕಪವಿತ್ರ ನಾಗಮಂಡಲೋತ್ಸವ ನಡೆಯಿತು.
ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಕುಟುಂಬಿಕರಿಂದ ಮೂಲ ನಾಗ ಬನದಲ್ಲಿ ಹಾಲಿಟ್ಟು ಸೇವೆ, ಮಂಡಲ ಪೂಜೆ, ಮತ್ತು ನಾಗಮಂಡಲೋತ್ಸವದಲ್ಲಿ ನಾಗ ಪಾತ್ರಿಗಳು ಮರವಂತೆ- ಬಡಾಕೆರೆ ಲೋಕೇಶ ಅಡಿಗ, ಶ್ರೀ ಸವೋ೯ತ್ತಮ ವೈದ್ಯರು ಮತ್ತು ಬಳಗದವರಿಂದ, ಪ್ರಧಾನ ಪುರೋಹಿತರಾದ ಮಧುಸೂದನ ಬಾಯರಿ, ಮಣೂರು. ಇವರಿಂದ ನಾಗಮಂಡಲೋತ್ಸವ ಸಂಪನ್ನಗೊಂಡಿದೆ.