ಒತ್ತಡದಿಂದ ಸಮಸ್ಯೆ ಸಮಸ್ಯೆಯಿಂದ ಒತ್ತಡಕ್ಕೆ ಸ್ಪಂಧಿಸಿ – ಪಿ. ವಿ. ಭಂಡಾರಿ

Views: 0
ಉಡುಪಿ: ಜಾಲತಾಣದ ಸೈಬರ್ ಅಪರಾಧ,ಬೆದರಿಕೆ, ವಾಟ್ಸಪ್, ಡ್ರಗ್ಸ್ ಗಾಂಜಾ ವ್ಯಸನಗಳಿಗೆ ವಿದ್ಯಾರ್ಥಿಗಳು ತುತ್ತಾಗಿ, ಪೋಷಕರ ಬುದ್ಧಿ ಮಾತಿಗೆ ಪ್ರಶ್ನಿಸಿ, ಒಂಟಿ ಜೀವನಕ್ಕೆ ಜಾರಿ ಏನು ಮಾಡಬಾರದು ಅದನ್ನು ಮಾಡಲು ಹೋಗಿ ದಾರಿ ತಪ್ಪುತ್ತಾರೆ. ಸರಿಯಾದ ಸಂದಭ೯ದಲ್ಲಿ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು ಎಂದು ಖ್ಯಾತ ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿ ಹೇಳಿದರು.
ಅವರು ಬಂಟಕಲ್ ಶ್ರೀ ಮಧ್ವವಾದಿರಾಜ ಇನ್ ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಮತ್ತುಮೇನೇಜ್ ಮೆಂಟ್ ಕಾಲೇಜಿನಲ್ಲಿ ನಡೆದ ಶಿಕ್ಷಕ ಪೋಷಕರ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯದಲ್ಲಿ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತರಾಗದೇ ಕೇವಲ ಅಂಕ ಗಳಿಸುವುದು ಮುಖ್ಯವಲ್ಲ ಅವರ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿರುವ ಸೃಜನಶೀಲತೆಗೆ ಪ್ರೋತ್ಸಾಹ ನೀಡಿ ಸಾಮಾಜಿಕ ಮತ್ತು ಮಾನಸಿಕ ಆತಂಕ ಕೀಳರಿಮೆಯನ್ನು ದೂರ ಮಾಡಿ ದೈಯ೯ ತುಂಬಬೇಕು. ಮಕ್ಕಳಲ್ಲಿರುವ ನಕರಾತ್ಮಕ ಗುಣಗಳನ್ನು ಬೊಟ್ಟು ಮಾಡುವುದನ್ನು ಬಿಟ್ಟು ಸಕರಾತ್ಮಕ ಗುಣಗಳನ್ನು ಎತ್ತಿ ಹಿಡಿದು. ಅವರ ಭಾವನೆಗಳನ್ನು ಅಥ೯ಮಾಡಿಕೊಂಡು ವಿದ್ಯಾಥಿ೯ಗಳ ಬಗ್ಗೆ ಸದಾ ಸಂಪಕ೯ದಲ್ಲಿರು ವಂತೆ ವೈದ್ಯರು ಪೋಷಕರಿಗೆ ತಿಳಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ್ ಭಟ್. ಮಧ್ವವಾದಿರಾಜ ಮಠದ ಶಿಕ್ಷಣ ಟ್ರಸ್ಟ್ ಕಾಯ೯ದಶಿ೯ ರತ್ನಕುಮಾರ್ ಪೋಷಕರೊಂದಿಗೆ ಮಾತನಾಡಿದರು. ಪ್ರೀತಿ ಕಾಯ೯ಕೃಮ ನಿವ೯ಹಿಸಿದರು. ರವೀಂದ್ರ ಎಚ್.ಜೆ ಹಾಗೂ ಶಿಕ್ಷಕ ವೃಂದದವರು ಇದ್ದರು.