ಇತರೆ

ಎಂಗೇಜ್ಮೆಂಟ್ ಮುನ್ನಾ ದಿನ ದೇವಾಲಯಕ್ಕೆ  ಹೋಗ್ತಿದ್ದಾಗ ಭೀಕರ ಅಪಘಾತ; ಯುವಕ ಸಾವು

Views: 87

ಚಿತ್ರದುರ್ಗ: ಇಂದು ಶನಿವಾರದ ನಿಮಿತ್ತ ಮಾರುತಿ ದೇವಾಲಯಕ್ಕೆ ತೆರಳುವಾಗ ಕಾರು-ಲಾರಿ ಮಧ್ಯೆ ಭಯಾನಕ ಆಕ್ಸಿಡೆಂಟ್ ಸಂಭವಿಸಿ ಕೃಷಿ ಇಲಾಖೆ ನೌಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ತಿರುಮಲ ಡಾಬಾ ಬಳಿ ನಡೆದಿದೆ.

ಚಿತ್ರದುರ್ಗ ಮುನ್ಸಿಪಲ್ ಕಾಲೋನಿಯ 5ನೇ ಕ್ರಾಸ್ ನಿವಾಸಿ ವಿಶಾಲ್ (28) ಮೃತ ದುರ್ದೈವಿ. ಇವರು ಹೊಳಲ್ಕೆರೆಯ ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಾಳೆಯೇ ಇವರ ಎಂಗೇಜ್ಮೆಂಟ್ ಇತ್ತು. ಇಂದು ಶನಿವಾರ ನಿಮಿತ್ತ ಹೊಳಲ್ಕೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಚಿತ್ರದುರ್ಗದ ತಿರುಮಲ ಡಾಬಾದ ಬಳಿ ಬರುತ್ತಿದ್ದಂತೆ ಕಾರು ಮತ್ತು ಲಾರಿ ಮಧ್ಯೆ ಭೀಕರವಾದ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ವಿಶಾಲ್ ಮೃತಪಟ್ಟಿದ್ದಾನೆ. ಅಪಘಾತದಿಂದ ಲಾರಿ ನೆಲಕ್ಕೆ ಉರುಳಿ ಬಿದ್ದಿದ್ದರೇ, ಕಾರು ಫುಲ್ ಜಖಂ ಆಗಿದೆ. ವಿಶಾಲ್​ಗೆ ಶಿವಮೊಗ್ಗದ ಸಾಗರ ಮೂಲದ ಯುವತಿಯೊಂದಿಗೆ ನಾಳೆ ಎಂಗೇಜ್ಮೆಂಟ್ ನಡೆಯಬೇಕಿತ್ತು. ಖುಷಿ ಸಂಗತಿಯಲ್ಲಿ ಇರುವಾಗಲೇ ಯಮರಾಯ ಬಂದು ಜೀವ ತೆಗೆದಿದ್ದಾನೆ. ಇದು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Back to top button
error: Content is protected !!