ಸಾಂಸ್ಕೃತಿಕ

ಅಯೋಧ್ಯೆ ರಾಮನ ಎದುರು ವೀಣೆ ನುಡಿಸಲು ಕನ್ನಡತಿ ಶುಭಾ ಸಂತೋಷ್ ವಾದ್ಯ ಮೇಳಕ್ಕೆ ಆಹ್ವಾನ!

Views: 61

ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಕೆಲವೇ ಕೆಲವು ಮಂದಿಗೆ ಆಹ್ವಾನ ಸಿಕ್ಕಿದೆ. ಆದರೀಗ ರಾಮಜನ್ಮ ಭೂಮಿಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರಿಗೂ ಆಹ್ವಾನ ಬಂದಿದ್ದು, ವೀಣೆ ನುಡಿಸಲು ಅವರನ್ನು ಕೋರಲಾಗಿದೆ.

ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣಾ ಮನೋಭಾವದಲ್ಲಿ ಮೇಳ ನಡೆಯಲಿದೆ. ಈ ಮೇಳದಲ್ಲಿ ಕನ್ನಡತಿ ಶುಭಾ ಸಂತೋಷ ವೀಣೆಯನ್ನು‌ ನುಡಿಸಲು ಆಹ್ವಾನ ಬಂದಿದೆ. ಆಹ್ವಾನ ಸಿಕ್ಕ ವಿಷಯ ಕೇಳಿ ಶುಭಾ ಅವರು ಸಂತೋಷಪಟ್ಟಿದ್ದಾರೆ.

ಅಯ್ಯೋಧೆಯಲ್ಲಿ‌ ಸುಮಾರು 22 ರಾಜ್ಯಗಳ ಶಾಸ್ತ್ರೀಯ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಮೊಳಗಲಿವೆ. ಈ ಹಿನ್ನಲೆ ಶುಭಾ ಅವರಿಗೂ ಅಹ್ವಾನ ಬಂದಿದೆ.

ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು ಶುಭಾ ಅವರ ಗುರುಗಳು. ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶುಭಾ ವೀಣೆ ನುಡಿಸಿದ್ದಾರೆ. ಈಗ ರಾಮಂದಿರಲ್ಲಿ ಕನ್ನಡತಿ ವೀಣೆ ನುಡಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Related Articles

Back to top button
error: Content is protected !!