ಇತರೆ

ಜ.22 ರಂದು ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಯ ಪ್ರಯುಕ್ತ ವಕ್ವಾಡಿಯಲ್ಲಿ ವಿವಿಧ ಕಾರ್ಯಕ್ರಮಗಳು

Views: 134

ವಕ್ವಾಡಿ:  22 ನೇ ಜನವರಿ 2024 ಸೋಮವಾರದ ದಿನ ನಮ್ಮ ದೇಶವೇ ಹೆಮ್ಮೆ ಪಡುವಂತಹ ಹಾಗೂ ಎಲ್ಲಾ ಹಿಂದುಗಳ ಹೃದಯದಲ್ಲಿ ಅಚ್ಚಳಿಯದೆ ಉಳಿಯುವಂತಹ ಮಹತ್ವದ ದಿನ. ಇಂತಹ ಅಭೂ ತಪೂರ್ವ ಕ್ಷಣಗಳಿಗಾಗಿ ಇಡೀ ಭಾರತ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಅಂದು ನಮ್ಮೆಲ್ಲರ ಆರಾಧ್ಯ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಶ್ರೀ ಮೋದಿಜಿ ಅವರು ನೆರವೇರಿಸಲಿದ್ದಾರೆ. ರಾಮಮಂದಿರದ ದೈವಿಕತೆ ಮತ್ತು ಸೌಂದರ್ಯವನ್ನು ವೀಕ್ಷಿಸಲು ಇಡೀ ಭಾರತ ದೇಶವಲ್ಲದೇ ಹೊರದೇಶದಲ್ಲಿಯೂ ಜನರು ಕಾತುರದಿಂದ ಕಾಯುತ್ತಿದ್ದಾರೆ. 

ಈ ಶುಭ ದಿನದಂದು ನಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಈ ಅದ್ಭುತ ಕ್ಷಣಗಳನ್ನು ವೀಕ್ಷಿಸಿ ಪ್ರಸಾದವನ್ನು ಸ್ವೀಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಯ ಪ್ರಯುಕ್ತ ವಕ್ವಾಡಿ ಪಂಚಾಯತ್ ವಠಾರದಲ್ಲಿ 25 ಅಡಿಯ ಶ್ರೀ ರಾಮನ ಬ್ಯಾನರ್ ಅಳವಡಿಸಲಾಗಿದೆ.ಮತ್ತು ವಕ್ವಾಡಿ ಗ್ರಾಮದ ಪ್ರಮುಖ ರಸ್ತೆಗಳಾದ ನವನಗರ, ವಕ್ವಾಡಿ ಪಂಚಾಯತ್ ವಠಾರ, ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಶುಭಕೋರಿಕೆಯ ಬ್ಯಾನರ್ ಗಳನ್ನು ಅಳವಡಿಸಲಾಗಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ ಕಾರ್ಯಕ್ರಮಗಳ ವಿವರ

ಬೆಳಿಗ್ಗೆ- 10 ಗಂಟೆಗೆ ರಾಮ ಭಕ್ತರಿಂದ ಭಜನಾ ಕಾರ್ಯಕ್ರಮ 

ಬೆಳಿಗ್ಗೆ- 10.30ಕ್ಕೆ ಧಾರ್ಮಿಕ ಕಾರ್ಯಕ್ರಮ 

ಬೆಳಿಗ್ಗೆ- 11 ಗಂಟೆಯಿಂದ ಬ್ರಹತ್ ಪರದೆಯಲ್ಲಿ ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ನೇರಪ್ರಸಾರದ ಕಾರ್ಯಕ್ರಮ.

ಮಧ್ಯಾಹ್ನ- 12.30ರಿಂದ ಅನ್ನಸಂತರ್ಪಣೆ ನೆಡೆಯಲಿದೆ.

ಈ ಸುಸಂದರ್ಭದ ದಿನದಂದು ವಕ್ವಾಡಿ  ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಆವರಣದಲ್ಲಿ ದೊಡ್ಡ LED ಟಿವಿಯಲ್ಲಿ ರಾಮಲಲ್ಲಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಬನ್ನಿರಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ. ಇಂತಹ ಆನಂದದ ಕ್ಷಣಗಳನ್ನು ಅನುಭವಿಸೋಣ.

ಶ್ರೀ ರಾಮ ಭಕ್ತರು ವಕ್ವಾಡಿ. 

 

Related Articles

Back to top button
error: Content is protected !!