ಇತರೆ

ಪ್ರೀತಿಸಿ ಮದುವೆಯಾದ ಯುವತಿ ರಾತ್ರಿ ಮಲಗಿದ್ದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ! 

Views: 191

ಶಿವಮೊಗ್ಗ: ಎಂಟು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕು ನಾಲೂರು ಕೊಳಿಗೆ ಸಮೀಪ ದಾಸನಕೊಡಿಗೆಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು 24 ವರ್ಷದ ಶಮಿತಾ ಎಂದು ಗುರುತಿಸಲಾಗಿದೆ.

ಶಮಿತಾ ಅವರು ವಿದ್ಯಾಥ್  ಯುವಕನನ್ನು     2023ರ ಮಾರ್ಚ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಪತಿ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ರಾತ್ರಿ ಪಾಳಿ ಇದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದಾರೆ. ಆ ಬಳಿಕ ಶಮಿತಾ ಮನೆಯ ಉಪ್ಪರಿಗೆ ಮೇಲಿದ್ದ ಕೋಣೆಗೆ ಹೋಗಿ ಮಲಗಿದ್ದಾರೆ.

ಬೆಳಗ್ಗೆ ಎಷ್ಟೊತ್ತಾದರೂ ರೂಮಿನಿಂದ ಹೊರಕ್ಕೆ ಬರದ ಕಾರಣ ಮನೆಯವರು ಬಾಗಿಲು ತಟ್ಟಿದ್ದಾರೆ. ಅನುಮಾನಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ. ಶಮಿತಾರ ಮೃತದೇಹ ಕಂಡುಬಂದಿದೆ. ನಾಲೂರು ಕೊಳಿಗೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೊಲೀಸರಿಗೆ ವಿಷಯ ಮುಟ್ಟಿಸಿ ಸ್ಥಳೀಯರು ಮನೆಯ ಬಳಿ ಜಮಾಯಿಸಿದ್ದರು. ಮೃತಳ ಫೋಷಕರು ಬರುವರೆಗೂ ಕೋಣೆಯ ಬಾಗಿಲು ತೆಗೆದಿರಲಿಲ್ಲ. ಅಂತಿಮವಾಗಿ ಪೋಷಕರ ಸಮ್ಮುಖದಲ್ಲಿ ಬಾಗಿಲು ಒಡೆದು ಶಮಿತಾರ ಮೃತದೇಹ ಸ್ಥಳಾಂತರ ಮಾಡಲಾಗಿದೆ.

ಮೂಲಗಳ ಪ್ರಕಾರ, ಶಮಿತಾ ಸಾವನ್ನಪ್ಪಿರುವ ಸ್ಥಳದಲ್ಲಿ ಡೆತ್ ನೋಟ್ ಸಹ ಸಿಕ್ಕಿದೆ. ಅನಾರೋಗ್ಯದ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾಗಿ ಬರೆದಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.

Related Articles

Back to top button
error: Content is protected !!