ಸಾಂಸ್ಕೃತಿಕ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಹೆಸರಾಂತ ಗಾಯಕಿ ಅರ್ಚನ ಉಡುಪ,ಡಾ.ಗಣೇಶ್ ಗಂಗೊಳ್ಳಿ, ಸ್ಮಿತಾ ನಾಗರಾಜರಿಗೆ ಸನ್ಮಾನ 

Views: 40

ಕುಂದಾಪುರ: ಶ್ರೀ ಮೂಕಾಂಬಿಕ ದೇವಸ್ಥಾನ ಕೊಲ್ಲೂರು ಉಡುಪಿ ಜಿಲ್ಲೆ ಹಾಗೂ ಪಾಂಡೇಶ್ವರ ಕಾಳಿಂಗ ರಾವ್ ಪ್ರತಿಷ್ಠಾನ ಉಡುಪಿ ಜಿಲ್ಲೆ , ಇವರ ಸಂಯುಕ್ತ ಆಶ್ರಯದಲ್ಲಿ, ನಾಡಿನ ಹೆಸರಾಂತ ಗಾಯಕಿ ಶ್ರೀಮತಿ ಅರ್ಚನ ಉಡುಪ ಬಳಗದವರಿಂದ “ಗಾನ ಸಿಂಚನ” ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಶ್ರೀಮತಿ ಅರ್ಚನ ಉಡುಪ, ಪ್ರಸಿದ್ಧ ಗಾಯಕ, ಕಾರ್ಯಕ್ರಮ ನಿರೂಪಕರು ಆದ ಡಾ.ಗಣೇಶ್ ಗಂಗೊಳ್ಳಿ ಹಾಗೂ ಉದಯೋನ್ಮುಖ ಗಾಯಕಿ ಶ್ರೀಮತಿ ಸ್ಮಿತಾ ನಾಗರಾಜ್ ಉಡುಪಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಕಸ್ಮಾತಾಗಿ ಶ್ರೀ ಮೂಕಾಂಬಿಕ ದೇವಾಲಯಕ್ಕೆ ಆಗಮಿಸಿದ ಪ್ರಸಿದ್ಧ ಗಾಯಕ ಶ್ರೀ ಅಜೇಯ ವಾರಿಯರ್ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತ ಪಡಿಸಿದರು, ಈ ಕಾರ್ಯಕ್ರಮಕ್ಕೆ ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.

Related Articles

Back to top button
error: Content is protected !!