ರಾಜಕೀಯ
ಬಿಜೆಪಿಯಲ್ಲಿ ಹೊಸ ಯುಗ ಆರಂಭ, ಕುಟುಂಬ ರಾಜಕಾರಣ ಅಂತ್ಯ: ಯತ್ನಾಳ್

Views: 39
ವಿಜಯಪುರ, ಮೇಲಿಂದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೇಲೆ ವಾಗ್ದಾಳಿ ನಡೆಸುತ್ತಲೆ ಇದ್ದಾರೆ.
ಇದೀಗ ಹೆಸರೇಳದೆ ವಿಜಯೇಂದ್ರಗೆ ಟಾಂಗ್ ಕೊಟ್ಟ ಯತ್ನಾಳ್, 2024 ರ ಚುನಾವಣೆಯ ನಂತರ ದೇಶದಲ್ಲಿ ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣ ಅಂತ್ಯವಾಗಲಿದೆ. ಜೂನ್-ಜುಲೈವರೆಗೆ ಕಾದು ನೋಡಿ. ಜುಲೈನಲ್ಲಿ ಬಿಜೆಪಿ ಪಕ್ಷದಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದರು.
2024ರಲ್ಲಿ ಭಾರತದಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುತ್ತಾರೆ. ಜಗತ್ತಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು






