ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿಗೆ ಆಯ್ಕೆ

Views: 54
ಕನ್ನಡ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಖ್ಯಾತ ಗಾಯಕ ಹಾಗೂ ಸಂಘಟಕರು ಆದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ 33 ವರ್ಷಗಳಿಂದ ಜಾನಪದ, ಸಂಗೀತ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ್ದ ಅವರು ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಕರ್ನಾಟಕ ಜಾನಪದ ಭೂಷಣ ರಾಜ್ಯ ಪ್ರಶಸ್ತಿ , ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ- 2020 ಹಾಗೂ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿದ ಇವರನ್ನು ಅರ್ಹವಾಗಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ
ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಜಾನಪದ ಕಲಾವಿದ, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ.ಕನ್ನಡ ಜಾನಪದ ಪರಿಷತ್ ರಾಜ್ಯ ಸಮಿತಿಯ ನಿರ್ಣಯದಂತೆ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.
ಕಾರ್ಯಾಧ್ಯಕ್ಷರಾಗಿ ಉದಯಕುಮಾರ್ ಬಿ ಹೈಕಾಡಿ, ಖಜಾಂಚಿ ಯಾಗಿ ಸ್ಮಿತಾ ಎನ್.ಭಟ್ ಉಡುಪಿ, ಸಂಚಾಲಕರಾಗಿ ಭಾಸ್ಕರ್ ಗುಂಡಿಬೈಲು, ಜಂಟಿ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರ ಕಾಪು, ಮಾಧ್ಯಮ ಕಾರ್ಯದರ್ಶಿಯಾಗಿ ನರಸಿಂಹ ನಾಯಕ್ ಉಪ್ಪುಂದ ಬೈಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಂ ಪೆರ್ಡೂರು, ಸಮಿತಿ ಸದಸ್ಯರಾಗಿ ಸುನೀತಾ ಶೆಟ್ಟಿ ಕುಂದಾಪುರ, ರಮಣಿ ಬೈಂದೂರು, ವಸಂತಿ ಕಡಂಬಳ, ಅಶ್ವಿನಿ, ಚಂದ್ರಪಾಣ ಆಯ್ಕೆಯಾಗಿದ್ದಾರೆ.






