ಪ್ರವಾಸೋದ್ಯಮ

ಮಾಲ್ಡೀವ್ಸ್ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ: ವೀರೇಂದ್ರ ಸೆಹ್ವಾಗ್ ಕುಂದಾಪುರದ ಮರವಂತೆ ಬೀಚ್ ಬಗ್ಗೆ ಬ್ಯಾಟಿಂಗ್!

Views: 314

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡುವ ಮೂಲಕ ಭಾರಿ ವಿವಾದ ಕೆರಳಿಸಿದ್ದ ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ ಎಂದು ಅಲ್ಲಿನ ವಕ್ತಾರರು ತಿಳಿಸಿದ್ದಾರೆ.

ಮರವಂತೆ ಬೀಚ್ 

“ಸರ್ಕಾರಿ ಹುದ್ದೆಗಳಲ್ಲಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ಪೋಸ್ಟ್‌ಗಳನ್ನು ಮಾಡಿದವರನ್ನು ಅವರ ಕರ್ತವ್ಯಗಳಿಂದ ಅಮಾನತು ಮಾಡಲಾಗಿದೆ” ಎಂದು ಅಮಾನತುಗೊಂಡವರ ಹೆಸರು ಬಹಿರಂಗಪಡಿಸದೆ ಸರ್ಕಾರದ ಹೇಳಿಕೆ ತಿಳಿಸಿದೆ.

ಲಕ್ಷದ್ವೀಪಕ್ಕೆ ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯರು ತಮ್ಮ ಪ್ರವಾಸಿ ತಾಣವನ್ನಾಗಿ ದ್ವೀಪವನ್ನು ಆಯ್ಕೆ ಮಾಡುಕೊಳ್ಳುವಂತೆ ಪ್ರಚಾರ ಮಾಡಿದ್ದರು. ಇದರ ಬಳಿಕ ಶಿಯುನಾ ಅವರು ಪ್ರಧಾನಿ ಮೋದಿ ಅವರನ್ನು ‘ವಿದೂಷಕ’ ಮತ್ತು ‘ಕೈಗೊಂಬೆ’ ಎಂದು ವ್ಯಂಗ್ಯವಾಡಿದ್ದರು. ಈ ಟ್ವೀಟ್‌ಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಉಡುಪಿ ಬೀಚ್‍ಗಳ ಬಗ್ಗೆ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್!

ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದನ್ನು ಮಾಲ್ಡೀವ್ಸ್ ವ್ಯಂಗ್ಯವಾಡಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ. ಈ ಬೆನ್ನಲ್ಲೇ ಕ್ರಿಕೆಟಿಗರು ಸೇರಿ ಹಲವರು ಈ ಕ್ಯಾಂಪೇನ್‍ನಲ್ಲಿ ಪಾಲ್ಗೊಂಡು ಮೋದಿ ಬೆಂಬಲಕ್ಕೆ ನಿಂತಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರು ಭಾರತದ ಸುಂದರ ಬೀಚ್‌ಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಮರವಂತೆ ಬೀಚ್ ನ ಫೋಟೋಗಳು ಕೂಡ ಇದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.

ಸೆಹ್ವಾಗ್‌ ಹೇಳಿದ್ದೇನು..?: ನಮ್ಮಲ್ಲಿ ಮಾಲ್ಡೀವ್ಸ್‌ಗಿಂತ ಸುಂದರ ಬೀಚ್‍ಗಳಿವೆ. ಉಡುಪಿ, ಪುದುಚ್ಚೆರಿ, ಅಂಡಮಾನ್-ನಿಕೋಬಾರ್ ನ ದ್ವೀಪಗಳ ಜೊತೆಗೆ ಅದೆಷ್ಟೋ ಸುಂದರ ತಾಣಗಳಿವೆ. ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಇವುಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಲಿವೆ. ಆಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಮಯ ಬಂದಿದೆ. ನಮ್ಮ ಪ್ರಧಾನಿ ಬಗ್ಗೆ ಅನುಚಿತ ಹೇಳಿಕೆ ಕೊಟ್ಟ ಮಾಲ್ಡೀವ್ಸ್ ಮಂತ್ರಿಗಳಿಗೆ ಈ ರೀತಿಯಾಗಿ ತಿರುಗೇಟು ಕೊಡೋಣ ಎಂದು ಕರೆ ನೀಡಿದ್ದಾರೆ. ಇರ್ಫಾನ್ ಖಾನ್, ಸುರೇಶ್ ರೈನಾ ಸೇರಿ ಹಲವರು ಎಕ್ಸ್ ಮಾಡಿದ್ದಾರೆ.‌

ಸೆಹ್ವಾಗ್‌ ಅವರ ಈ ಪೋಸ್ಟ್‌ಗೆ ಎಕ್ಸ್‌ ಬಳಕೆದಾರರೊಬ್ಬರು ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್‌ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರಗಳಿವೆ ಎಂದು ಕರಾವಳಿ ಜಿಲ್ಲೆಯನ್ನು ಹೊಗಳಿದ್ದಾರೆ.

Related Articles

Back to top button