ರಾಜಕೀಯ

ಅನ್ನ ಭಾಗ್ಯದ ಅಕ್ಕಿ ಬದಲು ಹಣ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

Views: 29

ಬೆಂಗಳೂರು, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಬೇಕೆಂದು ಒತ್ತಾಯಿಸಿ ಕೆಎಸ್‌ಸಿ ಕರುನಾಡ ಸೇವಕರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಸರ್ಕಾರ ಅನ್ನಭಾಗ್ಯ ಯೋಜನೆಗೆ ಒಂದು ತಿಂಗಳಿಗೆ ಸುಮಾರು 1600 ಕೋಟಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ, 5 ಕೆಜಿ ಅಕ್ಕಿಯ ಬದಲು ಸುಮಾರು 800ಕೋಟಿ ಹಣವನ್ನು ನೀಡುತ್ತಿದೆ. ಈ 5 ಕೆಜಿ ಅಕ್ಕಿಯಲ್ಲಿ ಗುಣಮಟ್ಟ ಇಲ್ಲ. ಜತೆಗೆ, ಸರ್ಕಾರ ಒಂದು ಕೆಜಿ ಅಕ್ಕಿಯನ್ನು 38 ರೂಪಾಯಿ ಕೊಟ್ಟು ಖರೀದಿ ಮಾಡುತ್ತೆ. ಇದು ನ್ಯಾಯಬೆಲೆ ಅಂಗಡಿ ತಲುಪುದರಲ್ಲಿ ಒಂದು ಕೆಜಿ ಅಕ್ಕಿಗೆ ಸುಮಾರು 38 ರೂಪಾಯಿ ಆಗಿರುತ್ತೆ ಎಂದು ಹೇಳಿದರು.

ಈ 38 ರೂಪಾಯಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡೆದು ಬೇರೆ ಅಂಗಡಿಗೆ ಕೇವಲ 10 ರೂಪಾಯಿಗೆ ಮಾರುತ್ತಿದ್ದಾರೆ. ರಾಜ್ಯಾದ್ಯಂತ ಕರ್ನಾಟಕದಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ 1.28 ಕೋಟೆ ಪಡಿತರ ಚೀಟಿಗಳನ್ನು ಹೊಂದಿದೆ. ಸುಮಾರು ಶೇ.70ರಷ್ಟು ಜನ ಈ ಅನ್ನ ಭಾಗ್ಯದ ಫಲಾನುಭವಿಗಳು. ಅಕ್ಕಿ ಯನ್ನು ಮಾರಲು ಮುಖ್ಯ ಕಾರಣ ಅಕ್ಕಿ ಗುಣಮಟ್ಟ ಇಲ್ಲ ಎಂದು ಮತ್ತು ಇವರು ಉಪಯೋಗಿರುವ ಅಕ್ಕಿ ಇದು ಅಲ್ಲ ಎಂದು ಈ ಕಳಪೆ ಗುಣ ಮಟ್ಟದ ಅಕ್ಕಿಯನ್ನು ಸರಕಾರದ ಗಮನಕ್ಕೆ ತರುವುದು ನಮ್ಮ ಉದ್ದೇಶ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದುರ್ಗಾ ಪ್ರಸಾದ್ ಹೇಳಿದರು.

Related Articles

Back to top button
error: Content is protected !!