ಕರಾವಳಿ
ಕುಂದಾಪುರ:ಕೆಂಚನೂರಿನಲ್ಲಿ ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು

Views: 253
ಕುಂದಾಪುರ: ಕುಂದಾಪುರ ಭಾಗದಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಜಾಸ್ತಿ ಯಾಗಿದ್ದು, ಇಲ್ಲಿಗೆ ಸಮೀಪ ಕೆಂಚನೂರು ಎಂಬಲ್ಲಿ ಬಾಕ್ಸ್‌ನಲ್ಲಿ ಹಾಕಿ ಮನೆಯ ಕಪಾಟಿನಲ್ಲಿಟ್ಟಿದ್ದ ಒಟ್ಟು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿದೆ.
ಕರ್ಕುಂಜೆ ಗ್ರಾಮದ ಕೆಂಚನೂರು ನಿವಾಸಿ ಶರತ್ ಆಚಾರ್ಯ ಅವರು ನೀಡಿದ ದೂರಿನಂತೆ ಒಟ್ಟು 1.60 ಲಕ್ಷ ರೂ. ಮೌಲ್ಯದ 32 ಗ್ರಾಂ ತೂಕದ ಚಿನ್ನದ ಸರ ಹಾಗೂ 20 ಸಾವಿರ ರೂ. ಮೌಲ್ಯದ ನಾಲ್ಕೂವರೆ ಪವನಿನ ಉಂಗುರವಿದ್ದ ಬಾಕ್ಸ್ ಅನ್ನು ಜ. 7ರಂದು ಕಾರ್ಯಕ್ರಮಕ್ಕೆಂದು ತೆರಳಲು ನೋಡಿದಾಗ ಕಳವು ಆಗಿರುವುದು ಗೊತ್ತಾಯಿತು.
ತನ್ನ ಜೊತೆಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಹೋದ್ಯೋಗಿಯೂ ಜ. 5ರಿಂದ ಕೆಲಸಕ್ಕೆ ಬಾರದೇ ನಾಪತ್ತೆಯಾಗಿದ್ದು, ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿದ್ದು,ಇದರಿಂದ ಆತನ ಮೇಲೆ ಅನುಮಾನ ಇರುವುದಾಗಿ ಶರತ್ ಆಚಾರ್ಯ ಅವರು ದೂರು ನೀಡಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.