ಸಾಂಸ್ಕೃತಿಕ

ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಜೈಲಿನಿಂದ ಶೀಘ್ರ ಬಿಡುಗಡೆಗೆ ಮಳೆ ಹುಡುಗಿ ಪೂಜಾ ಗಾಂಧಿ ಮನವಿ

Views: 7

ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ನಟಿ ಪೂಜಾ ಗಾಂಧಿ ಬೆಂಬಲ ಕೊಟ್ಟಿದ್ದಾರೆ. ಆದಷ್ಟು ಬೇಗ ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಕನ್ನಡ ಪರ ಹೋರಾಟಗಾರರು ಆವೇಷದಲ್ಲಿ ಕಲ್ಲು ತೂರಾಟ ಮಾಡಿದ್ದಾರೆ. ಅವರು ಕಲ್ಲು ಎಸೆದಿರಲಿ ಅಥವಾ ಹೂವೆ ಎಸೆದಿರಲಿ ಅವರು ಕನ್ನಡಕ್ಕಾಗಿ ಎಸೆದಿದ್ದಾರೆ. ಅಲ್ಲದೇ ಕನ್ನಡ ಪರವಾಗಿ ಕೆಲಸ ಮಾಡ್ತಿದ್ದಾರೆ. ಸರ್ಕಾರ ಅವರ ಮೇಲೆ ಅನುಕಂಪ ತೋರಿಸಿ ಬಿಡುಗಡೆ ಮಾಡಬೇಕು ಎಂದು ಪೂಜಾಗಾಂಧಿ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಅಭಿಯಾನವನ್ನು ಕರವೇ ಹಮ್ಮಿಕೊಂಡಿತ್ತು. ಬೆಂಗಳೂರಿನ ಪ್ರತಿಷ್ಠಿತ ಅಂಗಡಿ, ಮಾಲ್ ಹಾಗೂ ವಿವಿಧ ಭಾಗಗಳಲ್ಲಿದ್ದ ಇಂಗ್ಲಿಷ್ ಹಾಗೂ ಹಿಂದಿ ಬೋರ್ಡ್​ಗಳನ್ನು ಕಿತ್ತೆಸೆಯುವ ಪ್ರಯತ್ನ ಮಾಡಿತ್ತು. ಈ ವೇಳೆ ಕೆಲವು ಹಿಂಸಾಚಾರಗಳು ನಡೆದ ಹಿನ್ನೆಲೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಂಧಿಸಲಾಗಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ನಾರಾಯಣಗೌಡ ಇದ್ದಾರೆ.

Related Articles

Back to top button
error: Content is protected !!