ಸಾಂಸ್ಕೃತಿಕ

ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್​  ಅಮಿತ್ ಹೊಸ ಜೀವನಕ್ಕೆ 

Views: 3

ಕನ್ನಡ ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮಗಳು ನಡೆಯುತ್ತಿವೆ. ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್​ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಇಷ್ಟ ಪಟ್ಟಿದ್ದ ಹುಡುಗ ಅಮಿತ್ ಜೊತೆ ಹಸಮಣೆ ಏರಿದ್ದಾರೆ.

ಕಳೆದ ವರ್ಷವಷ್ಟೆ ಪ್ರಿಯಾಂಕ ಹಾಗೂ ಅಮಿತ್ ನಾಯಕ್​ ಅವರ ಎಂಗೇಜ್‌ಮೆಂಟ್ ಆಗಿತ್ತು. ಒಂದು ವರುಷದ ನಂತರ ಇಬ್ಬರು ಸಪ್ತಪದಿ ತುಳಿದಿದ್ದಾರೆ. ಮಂಗಳೂರಿನ ಸುಳ್ಯಾದಲ್ಲಿ ಇಬ್ಬರು ಮದುವೆ ಬಹಳ ಅದ್ಧೂರಿಯಾಗಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಪ್ರಿಯಾಂಕಾ ಕಾಮತ್​ ಹಾಗೂ ಅಮಿತ್ ನಾಯಕ್ ಅವರು ಇಡೀ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆ ಉಡುಪಿನಲ್ಲಿ ನವಜೋಡಿಯೂ ತುಂಬಾನೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಹಳದಿ, ಸಂಗೀತ್ ನೈಟ್ ಹೀಗೆ ಮದುವೆಯಲ್ಲಿ ಎಲ್ಲರೂ ಸಂತೋಷದಿಂದ ಸಮಯ ಕಳೆದಿದ್ದಾರೆ. ಪ್ರಿಯಾಂಕಾ ಕಾಮತ್​ ಹಾಗೂ ಅಮಿತ್ ನಾಯಕ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿವೆ. ಅದ್ಧೂರಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿ ಈ ಜೋಡಿಗೆ ಅಭಿಮಾನಿಗಳು ಮದುವೆಗೆ ಶುಭ ಹಾರೈಸಿದ್ದಾರೆ.

ಪ್ರಿಯಾಂಕಾ ಹಾಗೂ ಅಮಿತ್ ಈ ಇಬ್ಬರು ಬ್ಯಾಚೂಲರ್ ಲೈಫ್​ನಿಂದ ಈಗ ಮದುವೆಯ ಬಂಧನದ ಹೊಸ ಜೀವನ ಕಡೆ ಪಯಣ ಬೆಳಸಿದ್ದಾರೆ. ಇನ್ನು ಈ ಜೋಡಿಯ ಮದುವೆಗೆ ಕಿರುತೆರೆ ಕಲಾವಿದರು ಭಾಗಿಯಾಗಿ ಶುಭಾ ಹಾರೈಸಿದ್ದಾರೆ.

ಕಿರುತೆರೆಯ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಗಿಚ್ಚಿ ಗಿಲಿಗಿಲಿ ಕೂಡ ಒಂದು. ಜನ ಮೆಚ್ಚಿದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್ 1 ಕಾಮಿಡಿ ಕಲಾವಿದರಲ್ಲಿ ನಟಿ ಪ್ರಿಯಾಂಕಾ ಕಾಮತ್ ಕೂಡ ಒಬ್ಬರು. ಪ್ರಿಯಾಂಕ ಅವರ ಪರಿಚಯ ಹೊಸದಾಗಿ ಹೇಳಬೇಕಿಲ್ಲಾ. ಪ್ರಿಯಾಂಕ ಒಬ್ಬ ಒಳ್ಳೆಯ ಕಾಮಿಡಿ ಕಲಾವಿದರು. ಗಿಚ್ಚಿ ಗಿಲಿಗಿಲಿ ಮೂಲಕ ಮತ್ತಷ್ಟು ಕರ್ನಾಟಕ ಮನ ಮನೆಗಳಿಗೆ ಚಿರಪರಿಚಿತರಾಗಿದ್ದಾರೆ.

Related Articles

Back to top button
error: Content is protected !!